ಗೂಗಲ್‌ ಮ್ಯಾಪ್‌ ನೆರವಿನಿಂದ ಕಾರು ಚಲಾಯಿಸಿ ಸೇತುವೆಯಿಂದ ಬಿದ್ದು 3 ಮಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, . 26. ಮೂವರು ಸ್ನೇಹಿತರು ಗೂಗಲ್‌ ಮ್ಯಾಪ್‌ ನೆರವಿನಿಂದ ಕಾರು ಚಲಾಯಿಸಿಕೊಂಡು ಅಪೂರ್ಣ ಸೇತುವೆ ಮೇಲೆ ಹೋಗಿ, ಬಿದ್ದು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರನ್ನು ಫಾರೂಕಾಬಾದ್‌ ಸಹೋದರರಾದ ನಿತಿನ್ (30) ಅಜಿತ್ (30) ಮತ್ತು ಮೈನಪುರಿ ಜಿಲ್ಲೆಯ ಅಮಿತ್ ಎಂದು ಗುರುತಿಸಲಾಗಿದೆ. ಗೂಗಲ್‌ ಮ್ಯಾಪ್‌ ಇಂಡಿಯಾ ಹಾಗೂ ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಬದೌನ್ ಪೊಲೀಸರು ತಿಳಿಸಿದ್ದಾರೆ. ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂದು ರಾಯ್ಬರೇಲಿಗೆ ಕಾರಿನಲ್ಲಿ ತೆರಳುತ್ತಿದ್ದ ಮೂವರು ಸ್ನೇಹಿತರು ಗೂಗಲ್‌ ಮ್ಯಾಪ್ ನೆರವಿನಿಂದ ಬರೇಲಿ ಸಮೀಪ ರಾಮಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಬಳಸಿದ್ದಾರೆ. ಆದರೆ, ಆ ಸೇತುವೆ ಅಪೂರ್ಣವಾಗಿತ್ತು. ಇದರಿಂದ ನದಿಗೆ ರಭಸವಾಗಿ ಬಿದ್ದ ಕಾರು ಸಂಪೂರ್ಣ ಜಖಂಗೊಂಡಿತ್ತು. ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು. ಗೂಗಲ್‌ ಮ್ಯಾಪ್‌ ಹಾಗೂ ನಮ್ಮ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

Also Read  ಆತೂರು ಶ್ರೀ ಸದಾಶಿವ ದೇವಸ್ಥಾನಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

 

error: Content is protected !!