ಉಜಿರೆ: ಬೈಕಿಗೆ ಟ್ಯಾಂಕರ್ ಢಿಕ್ಕಿ ► ಸವಾರರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮಾ.24. ಟ್ಯಾಂಕರೊಂದು ಬೈಕಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಮೃತರನ್ನು ಉಜಿರೆ‌ ನಿವಾಸಿಗಳಾದ ಬೈಕ್ ಸವಾರ ಸುಧೀರ್ ಹಾಗೂ ಸಹಸವಾರ ಹರೀಶ್ ಎಂದು ಗುರುತಿಸಲಾಗಿದೆ. ಮೃತರನ್ನು ಪಲ್ಸರ್ ಬೈಕಿನಲ್ಲಿ ತಮ್ಮ‌ಮನೆ ಕಡೆಗೆ ತೆರಳುತ್ತಿದ್ದಾಗ ಉಜಿರೆ ಗ್ರಾಮದ ಅಳಿಕೆ ಎಂಬಲ್ಲಿ ರಾತ್ರಿ ಗುರಿಪಳ್ಳ ಕಡೆಯಿಂದ ಉಜಿರೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು, ಸುಧೀರ್ ಹಾಗೂ ಹರೀಶ್ ಎಂಬವರ ತಲೆಗೆ, ಕಾಲುಗಳಿಗೆ, ಮೈ-ಕೈಗಳಿಗೆ ತೀವ್ರ ತರದ ಗಾಯಗಳಾಗಿದ್ದು, ಉಜಿರೆಯ ಎಸ್ಡಿಎಂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟಿದ್ದಾರೆ. ಘಟನೆಯ ಬಗ್ಗೆ ನವೀನ್ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಟ್ಯಾಂಕರ್ ಚಾಲಕ ಪುಷ್ಪರಾಜ್ ವಿರುದ್ಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ದಕ್ಷಿಣ ಕನ್ನಡ: ಕೇಂದ್ರ ಸರ್ಕಾರದಿಂದ PMABHIM ಯೋಜನೆಯಡಿ 25.11 ಕೋಟಿ ಅನುದಾನ ಬಿಡುಗಡೆ- ಸಂಸದ ಕ್ಯಾ. ಚೌಟ

error: Content is protected !!