ಮೋದಿ ಸರ್ಕಾರದ ಮಹತ್ವದ ಹೆಜ್ಜೆ; ದೇಶದ ಮೊಟ್ಟ ಮೊದಲ ಹೈಡ್ರೋಜನ್ ಚಾಲಿತ ರೈಲಿನ ಸಂಚಾರಕ್ಕೆ ಸಜ್ಜು

(ನ್ಯೂಸ್ ಕಡಬ) newskadaba.com ನವದೆಹಲಿ, ನ.22. ಪುನಃ ಉತ್ಪಾದಿಸಬಹುದಾದ ಪರಿಸರಕ್ಕೆ ಹಿತಕರವಾಗಿರುವ ಇಂಧನದ ಅಳವಡಿಕೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇರಿಸಿರುವ ಭಾರತೀಯ ರೈಲ್ವೆ, ಮುಂದಿನ ತಿಂಗಳು ದೇಶದ ಮೊಟ್ಟಮೊದಲ ಹೈಡ್ರೋಜನ್‌ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಜ್ಜಾಗಿದೆ.

ಇದು ಮೋದಿ ಸರ್ಕಾರದ ಮಹತ್ವದ ಹೆಜ್ಜೆಯಾಗಿದ್ದು, ಡಿಸೆಂಬರ್‌ ತಿಂಗಳಲ್ಲಿ ಹರ್ಯಾಣದ ಜಿಂದ್‌ ಮತ್ತು ಸೋನಿಪತ್‌ ನಡುವಿನ 90 ಕಿ.ಮೀ. ಮಾರ್ಗದಲ್ಲಿ ಜಲಜನಕದಿಂದ ಸಂಚರಿಸುವ ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ.ಈ ಯೋಜನೆಯು ಯಶಸ್ವಿಗೊಂಡಲ್ಲಿ ಮುಂದಿನ ವರ್ಷ ಒಟ್ಟು 35 ಹೈಡ್ರೋಜನ್‌ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

Also Read  ಭಾರತ -ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಸುಳ್ಯದಲ್ಲಿ ನುಡಿನಮನ

ಡೀಸೆಲ್‌ಗೆ ಪರ್ಯಾಯವಾಗಿ ಹೈಡ್ರೋಜನ್ ಬಳಕೆ:

ಸದ್ಯ ದೇಶದ ಎಲ್ಲಾ ರೈಲ್ವೆ ಗಾಡಿಗಳು ವಿದ್ಯುತ್ ಮತ್ತು ಡೀಸೆಲ್‌ ಇಂಧನ ಬಳಸಿ ಓಡುತ್ತಿವೆ. ಜಲಜನಕ ಬಳಸಿದರೆ ಡೀಸೆಲ್‌ನಿಂದ ವಾತಾವರಣಕ್ಕೆ ಇಂಗಾಲ ಬಿಡುಗಡೆಯಾಗುವುದನ್ನು ತಪ್ಪಿಸುವ ಮೂಲಕ ಮಾಲಿನ್ಯ ಕಡಿಮೆ ಮಾಡಬಹುದು. ಅಲ್ಲದೆ, ಜಲಜನಕವು ಸೋವಿ ಮತ್ತು ಸುಲಭವಾಗಿ ಸಿಗುವ ಇಂಧನವಾಗಿದೆ. 2030ರ ವೇಳೆಗೆ ಶೂನ್ಯ ಕಾರ್ಬನ್‌ ಬಿಡುಗಡೆಯ ಗುರಿ ಸಾಧಿಸುವ ರೈಲ್ವೆ ಇಲಾಖೆಯ ಸಂಕಲ್ಪಕ್ಕೆ ಇದು ಪೂರಕವಾಗಿದೆ.

error: Content is protected !!
Scroll to Top