(ನ್ಯೂಸ್ ಕಡಬ) newskadaba.com ತಿರುವನಂತಪುರ, ನ. 18. ಕೇರಳದ ಚಲಕುಡಿಯಲ್ಲಿ ಕಾರು ಚಾಲಕನೊಬ್ಬ ಆ್ಯಂಬುಲೆನ್ಸ್‌ಗೆ ಮುಂದೆ ಹೋಗಲು ಅಡ್ಡಿಪಡಿಸಿದ ಹಿನ್ನೆಲೆ ಆತನ ಲೈಸೆನ್ಸ್ ರದ್ದು ಪಡಿಸಿ 2.5 ಲಕ್ಷ ರೂ. ದಂಡವಿಧಿಸಿದ್ದಾರೆ. ಆ್ಯಂಬುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ರಸ್ತೆಯಲ್ಲಿ ಕಾರಿನ ಚಾಲಕ ಮುಂದೆ ಹೋಗಲು ಬಿಡದೆ ಅಡ್ಡ ಹಾಕಿದ್ದಾನಂತೆ. ಇದನ್ನು ಆ್ಯಂಬುಲೆನ್ಸ್‌ನಲ್ಲಿದ್ದ ವ್ಯಕ್ತಿಯೊಬ್ಬರು ವಿಡಿಯೊ ಮಾಡಿದ್ದಾರೆ.
ಕಾರಿನಲ್ಲಿರುವವನು ಎರಡು ನಿಮಿಷಗಳಿಗೂ ಹೆಚ್ಚು ಕಾಲ ಆ್ಯಂಬುಲೆನ್ಸ್‌ಗೆ ಮುಂದೆ ಹೋಗಲು ಬಿಡದೆ ಅಡ್ಡಹಾಕಿದ್ದಾನಂತೆ. ಆ್ಯಂಬುಲೆನ್ಸ್ ಚಾಲಕನ ಪದೇ ಪದೇ ಹಾರ್ನ್ ಮತ್ತು ಸೈರನ್ ಹಾಕಿದರೂ, ಚಾಲಕ ಆ್ಯಂಬುಲೆನ್ಸ್‌ಗೆ ಮುಂದೆ ಹೋಗಲು ಬಿಡಲಿಲ್ಲ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದ ನಂತರ ಕೇರಳ ಪೊಲೀಸರು ತ್ವರಿತವಾಗಿ ವಾಹನ ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದು, 2.5 ಲಕ್ಷ ದಂಡ ವಿಧಿಸಿದ್ದಾರೆ.