31 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆಬಾಳುವ ಕದ್ದ ಹೋಂನರ್ಸ್

(ನ್ಯೂಸ್ ಕಡಬ) newskadaba.com ಉಡುಪಿ, ನ. 18. ವೃದ್ಧೆಯೊರ್ವರ ಆರೈಕೆಗಾಗಿ ಇರಿಸಿದ್ದ ಹೋಮ್ ನರ್ಸ್ ಒಬ್ಬಳು ವೃದ್ಧೆಯ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಬಡಗುಬೆಟ್ಟು ನಿವಾಸಿ ಪ್ರಸಾದ್ ರವರು 15 ದಿನಗಳ ಹಿಂದೆ ಉಡುಪಿಯ ಪರ್ಕಳ ಪ್ರದೇಶದಲ್ಲಿನ ಹೆಲ್ತ್ ಕೇರ್ ಸರ್ವಿಸ್ ಮೂಲಕ ಹೋಮ್ ನರ್ಸ್ ಸಿದ್ದಪ್ಪ ಕೆ ಕೋಡ್ಲಿ ಅವರನ್ನು ತಮ್ಮ ತಂದೆಯ ಆರೈಕೆಗಾಗಿ ನೇಮಿಸಿಕೊಂಡಿದ್ದರು.

ನ. 17 ಆದಿತ್ಯವಾರದಂದು , ಸಿದ್ದಪ್ಪರವರು ಮನೆಯಲ್ಲಿ ಇರಿಸಲಾಗಿದ್ದ ಅಂದಾಜು 43,800 ಮೌಲ್ಯದ 6 ಗ್ರಾಂ ವಜ್ರದ ಕಿವಿಯೋಲೆಯನ್ನು ಕದ್ದಿದ್ದಾರೆ. ಜೊತೆಗೆ ಮಲಗುವ ಕೋಣೆಯಲ್ಲಿದ್ದ ರಹಸ್ಯ ಲಾಕರ್‌ನಿಂದ 31,17,100 ಮೌಲ್ಯದ ಚಿನ್ನಾಭರಣ ಹಾಗೂ ವಜ್ರಾಭರಣಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಕಳುವಾದ ವಸ್ತುಗಳ ಒಟ್ಟು ತೂಕ 427 ಗ್ರಾಂ ಎಂದು ಅಂದಾಜಿಸಲಾಗಿದೆ.

Also Read  ಸಂಪತ್‌ ಕುಮಾರ್‌‌ ಹತ್ಯೆ ಪ್ರಕರಣ ➤ ಮತ್ತೆ 3 ಆರೋಪಿಗಳ ಅರೆಸ್ಟ್‌

 

error: Content is protected !!
Scroll to Top