(ನ್ಯೂಸ್ ಕಡಬ) newskadaba.com ,ಸವಣೂರು, ಮಾ.23. ಯುವ ಸಮುದಾಯ ಬೆಳವಣಿಗೆಯಾದರೆ ದೇಶದಲ್ಲಿ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುತ್ತದೆ.ಯುವಶಕ್ತಿಗೆ ದೇಶವನ್ನು ಮುನ್ನಡೆಸುವ ಶಕ್ತಿ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ಯುವಜನತೆಯ ಶಕ್ತಿಯ ಸದ್ಬಳಕೆಯಾಗಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಪಾಲ್ತಾಡಿ ಗ್ರಾಮದ ಚೆನ್ನಾವರ ಶಾಲಾ ಮೈದಾನದಲ್ಲಿ ಭಾರತ ಸರಕಾರ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು,ತಾಲೂಕು ಯುವಜನ ಒಕ್ಕೂಟ ಪುತ್ತೂರು, ಅಭ್ಯುದಯ ಯುವಕ ಮಂಡಲ ಚೆನ್ನಾವರ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಮಂಡಲಗಳ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಸಕನಾಗಿ ಗ್ರಾಮೀಣ ಭಾಗದ ರಸ್ತೆ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಗೌರಿ ಹೊಳೆಗೆ ನೂತನ ಸೇತುವೆಯನ್ನು ನಿರ್ಮಿಸಲಾಗುವುದು ಎಂದರು.
ರಾಜೀವ ಗಾಂಧಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ರಘು ಮಾತನಾಡಿ,ಕ್ರೀಡೆಯಿಂದ ಸೌಹಾರ್ಧತೆಯುತ ವಾತವರಣ ನಿರ್ಮಾಣ ಸಾಧ್ಯ.ಸಾಮಾಜಿಕ ಕಾಳಜಿಯುಳ್ಳ ಯುವ ಸಂಘಗಳಿಂದ ಊರಿನ ಬೆಳವಣಿಗೆ ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ, ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಗ್ರಾಮೀಣ ಭಾಗದ ಆಭ್ಯುದಯ ಯುವಕ ಮಂಡಲವು ತನ್ನ ಅತ್ಯಲ್ಪ ಅವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಯುವಕ ಮಂಡಲವು ಸ್ಥಾಪನೆಯಾದ ಒಂದೂವರೆ ವರ್ಷದ ಅವಧಿಯಲ್ಲಿ ಪ್ರಥಮವಾಗಿ ಜಿಲ್ಲಾ ಮಟ್ಟದ ದೀಪಾವಳಿ ಕ್ರೀಡಾಕೂಟ, ಜಾನಪದ ಕ್ರೀಡಾಕೂಟ ನಡೆಸಿ ಈ ಬಾರಿ ಹಗಲು ಮತ್ತು ರಾತ್ರಿ ಹೊನಲು ಬೆಳಕಿನ ಜಿಲ್ಲಾ ಮಟ್ಟದ ಅಂತರ್ ಯುವ ಮಂಡಲಗಳ ಕ್ರೀಡಾಕೂಟ ನಡೆಸುವ ಮೂಲಕ ಒಂದೂವರೆ ವರ್ಷದಲ್ಲಿ ಮೂರು ಅತ್ಯುತ್ತಮ ಕ್ರೀಡಾಕೂಟ ನಡೆಸಿದಂತಾಗಿದೆ. ಯುವಜನ ಒಕ್ಕೂಟದಲ್ಲಿ ಇಲ್ಲಿನ ಯುವಕ ಮಂಡಲವೂ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದೆ ಎಂದರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ನಿರ್ದೇಶಕ ವೆಂಕಪ್ಪ ಗೌಡ ನಾರ್ಕೋಡು, ಪಾಲ್ತಾಡಿ ಚೈತನ್ಯ ರೈತಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಚೆನ್ನಾವರ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಸಿ.ಎ.ಕರೀಂ ಹಾಜಿ ಚೆನ್ನಾವರ, ಗುತ್ತಿಗಾರು ಗ್ರಾ.ಪಂ.ಸದಸ್ಯ ವೆಂಕಟ್ ವಳಲಂಬೆ, ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಅಭ್ಯುದಯ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ಬಣ್ಣ ದಾಸ್, ಅಧ್ಯಕ್ಷ ರವಿ ಎ.ಕೆ ,ಕಾರ್ಯದರ್ಶಿ ಧೀರಜ್ ರೈ,ಉಪಾಧ್ಯಕ್ಷ ಪುಟ್ಟಣ್ಣ ನಾಯ್ಕ,ಜತೆ ಕಾರ್ಯದರ್ಶಿ ಜಗದೀಶ್ ಉಪಸ್ಥಿತರಿದ್ದರು. ಯುವಕ ಮಂಡಲದ ಪದಾಧಿಕಾರಿಗಳಾದ ಕೃತೇಶ್ ರೈ, ಪ್ರಜ್ವಲ್ ರೈ, ನವೋದಯ, ಚರಣ್, ಪ್ರಮೋದ್ ಕುಮಾರ್, ಶರೀಫ್ ಕುಂಡಡ್ಕ ಅತಿಥಿಗಳನ್ನು ಗೌರವಿಸಿದರು. ಯುವಕ ಮಂಡಲದ ಕೋಶಾಧಿಕಾರಿ ಪ್ರವೀಣ್ ಚೆನ್ನಾವರ ಸ್ವಾಗತಿಸಿ, ಗೌರವಾಧ್ಯಕ್ಷ ದೀಕ್ಷಿತ್ ಜೈನ್ ವಂದಿಸಿದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಶಿಕ್ಷಕ ಶಶಿಕುಮಾರ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.