(ನ್ಯೂಸ್ ಕಡಬ) newskadaba.com ನ. 16. ವೈದ್ಯಕೀಯ ಶಿಕ್ಷಣದಲ್ಲಿ 25 ವರ್ಷಗಳ ಸ್ಮರಣಾರ್ಥ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ರಜತ ಮಹೋತ್ಸವದ ಸಮಾರೋಪ ಸಮಾರಂಭವು ಶುಕ್ರವಾರದಂದು ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜರಗಿತು.
ಈ ಸಂದರ್ಭದಲ್ಲಿ, ಫಾದರ್ ಮುಲ್ಲರ್ ಅವರು ಡೀಮ್ಡ್-ಟು-ಬಿ ವಿಶ್ವವಿದ್ಯಾಲಯವಾಗಲು ಪ್ರಕ್ರಿಯೆಯ ಪ್ರಾರಂಭವನ್ನು ಗಣ್ಯರು ಅನುಮೋದಿಸಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲೊ, ಎಫ್‌ಎಂಎಂಸಿಯ ಆಡಳಿತಾಧಿಕಾರಿ ಫಾ.ಅಜಿತ್ ಬಿ ಮೆನೆಜಸ್, ಡೀನ್ ಡಾ.ಆಂಟೋನಿ ಸಿಲ್ವನ್ ಡಿಸೋಜಾ ಮತ್ತು ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ ಅವರನ್ನು ಸನ್ಮಾನಿಸಲಾಯಿತು.
ಎಫ್‌ಎಂಎಂಸಿ ಡೀನ್ ಆ್ಯಂಟನಿ ಸಿಲ್ವನ್ ಡಿಸೋಜಾ, ಆಡಳಿತಾಧಿಕಾರಿ ಫಾ.ಅಜಿತ್ ಬಿ.ಮಿನೇಜಸ್, ವೈದ್ಯಕೀಯ ಅಧೀಕ್ಷಕ ಡಾ.ಉದಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ನಿರ್ದೇಶಕ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ಸ್ವಾಗತಿಸಿ, ಫಾದರ್ ಅಜಿತ್ ಬಿ ಮೆನೇಜಸ್ ವಂದಿಸಿದರು.ಡಾ ಜಾರ್ಜ್ ಜೋಸೆಫ್ ಮತ್ತು ಡಾ ಅಲ್ಫೋನ್ಸೋ ಮೇರಿ ಕಾರ್ಯಕ್ರಮ ನಿರೂಪಿಸಿದರು.