(ನ್ಯೂಸ್ ಕಡಬ) newskadaba.com ಸವಣೂರು, ಮಾ.23. ಜನರ ಮೂಲಭೂತ ಅವಶ್ಯಕತೆ ಈಡೇರಿಸಲು ಮೊದಲ ಆದ್ಯತೆ ನೀಡುತ್ತಿದ್ದೇವೆ. ರಸ್ತೆ ಹಾಗೂ ನೀರಿನ ಸಮಸ್ಯೆ ನಿವಾರಣೆಯಾದರೆ ಬಹುತೇಕ ಸಮಸ್ಯೆ ನಿವಾರಣೆಯಾದಂತೆ. ಈ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ಧನ್ ಹೇಳಿದರು. ಅವರು ಪಾಲ್ತಾಡಿ ಗ್ರಾಮದ ಚೆನ್ನಾವರದಲ್ಲಿ ಕಾಂಕ್ರೀಟಿಕೃತ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರೂ ಸಹಕಾರ ನೀಡಿದರೆ ಅಭಿವೃದ್ದಿಯ ವೇಗ ಹೆಚ್ಚಳವಾಗುತ್ತದೆ. ಇಲ್ಲಿನ ರಸ್ತೆಗೆ ಸಂಸದರು 5 ಲಕ್ಷ,ಶಾಸಕರು 10 ಲಕ್ಷ, ಜಿ.ಪಂ.ನಿಂದ 3 ಲಕ್ಷ, ಗ್ರಾ.ಪಂ. ನಿಂದ 50,000 ನೀಡಿದ್ದು ಈಗ ಉತ್ತಮ ರಸ್ತೆ ನಿರ್ಮಾಣವಾಗಿದೆ ಎಂದರು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಮಾತನಾಡಿ, ಪಾಲ್ತಾಡಿ 1ನೇ ವಾರ್ಡ್‍ನಲ್ಲಿ ಎಲ್ಲರ ಸಹಕಾರದಲ್ಲಿ ವಿವಿದ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಜನತೆಯ ಸಹಕಾರವೂ ಉತ್ತಮವಾಗಿದೆ. ಚೆನ್ನಾವರ ರಸ್ತೆ ಅಭಿವೃದ್ದಿಯಾಗುವ ಮೂಲಕ ಬಹುವರ್ಷದ ಬೇಡಿಕೆಯೊಂದು ಈಡೇರುವಂತಾಗಿದೆ ಎಂದರು. ಬಿಜೆಪಿ ಗ್ರಾ.ಪಂ. ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಮಾತನಾಡಿ, ಈ ಭಾಗದ ದಶಕಗಳ ಬೇಡಿಕೆಯಾದ ರಸ್ತೆ ಅಭಿವೃದ್ದಿ ಈಗ ಈಡೇರಿದಂತಾಗಿದೆ. ಅನುದಾನ ಬಿಡುಗಡೆಗೆ ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ ಅವರ ಪ್ರಯತ್ನವೂ ಕಾರಣ., ಜನಪ್ರತಿನಿಧಿಗಳೊಂದಿಗೆ ಸದಾ ಸಂಪರ್ಕವಿಟ್ಟುಕೊಂಡು ಕ್ಷೇತ್ರದ ಸಮಸ್ಯೆಗಳಿಗೆ ಆದ್ಯತೆಯ ಮೂಲಕ ಶಾಸಕರಿಗೆ ಒತ್ತಡ ತಂದು ಅವರ ಮೂಲಕ ರೂ.10 ಲಕ್ಷ ಅನುದಾನ ಬಿಡುಗಡೆಯಾಗಿದೆ.ಒಟ್ಟಿನಲ್ಲಿ ಸರ್ವರ ಸಹಕಾರದಲ್ಲಿ ಬೇಡಿಕೆಯೊಂದು ಈಡೇರಿದೆ ಎಂದರು.
ಈ ಸಂದರ್ಭ ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕೆ, ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್, ಸದಸ್ಯರಾದ ಸತೀಶ್ ಅಂಗಡಿಮೂಲೆ, ಜಯಂತಿ ಮಡಿವಾಳ , ಗಾಯತ್ರಿ ಬರೆಮೇಲು, ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ಕಲ್ಲೂರಾಯ, ದ.ಕ.ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಬೂತ್ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ, ಚೆನ್ನಾವರ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಸಿ.ಎ. ಕರೀಂ , ಮಾಜಿ ಅಧ್ಯಕ್ಷ ಸಿ.ಪಿ. ಮಹಮ್ಮದ್ ಹಾಜಿ, ಸಿ.ಪಿ. ಅಬ್ದುಲ್ಲಾ , ಯೂಸುಫ್ ಮುಸ್ಲಿಯಾರ್, ಅಬ್ದುಲ್ ಆಝೀಝ್, ಅಮೀನ್ ಅಬ್ದುಲ್ಲಾ, ಚೆನ್ನಾವರ ಅಭ್ಯುದಯ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಬ್ಬಣ್ಣ ದಾಸ್, ಸಾಮಾಜಿಕ ಮುಂದಾಳು ಬಾಲಕೃಷ್ಣ ರೈಹೊಸಮನೆ, ಜನಾರ್ಧನ್ ಆಚಾರ್, ಹಮೀದ್, ಅಬ್ದುಲ್ ರಹಿಮಾನ್, ಸತ್ತಾರ್, ಶ್ರೇಯಸ್, ಶಾಫಿ ಚೆನ್ನಾರ್ ರೈ, ಲೋಕೇಶ್ ಮಡಿವಾಳ, ಕಾಮಿಲ್ ಸಿ.ಪಿ. ಮೊದಲಾದವರಿದ್ದರು. ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಪ್ರವೀಣ್ ಚೆನ್ನಾವರ ಸ್ವಾಗತಿಸಿ, ಮಹಮ್ಮದ್ ಇಕ್ಬಾಲ್ ವಂದಿಸಿದರು.