ವಯನಾಡ್ ಭೂಕುಸಿತಕ್ಕೆ ‘ರಾಷ್ಟ್ರೀಯ ವಿಪತ್ತು’ ಸ್ಥಾನಮಾನ ನೀಡಲು ಗೃಹ ಖಾತೆ ರಾಜ್ಯ ಸಚಿವರ ನಿರಾಕರಣೆ

(ನ್ಯೂಸ್ ಕಡಬ) newskadaba.com . 14. ಕೇರಳದ ವಯನಾಡಿನಲ್ಲಿ ಭೂಕುಸಿತ ಉಂಟಾಗಿ ಈಗಾಗಲೇ ನಾಲ್ಕು ತಿಂಗಳುಗಳು ಕಳೆದಿದೆ. ಕಳೆದ ಜುಲೈ 31 ರಂದು ಈ ದಾರುಣ ಘಟನೆ ನಡೆದಿತ್ತು. ಈ ದುರ್ಘಟನೆಯಲ್ಲಿ ಸುಮಾರು 231 ಜನರು ಸಾವಿಗೀಡಾಗಿದ್ದು. ಈ ಭೀಕರ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಇದೀಗ ಕೇಂದ್ರ ಗೃಹಸಚಿವಾಲಯ ಕೇರಳದ ವಯನಾಡಿನಲ್ಲಿ ನಡೆದ ಭೀಕರ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಗೃಹ ವ್ಯವಹಾರಗಳ ರಾಜ್ಯ ಸಚಿವಾಲಯ, ನವದೆಹಲಿಯಲ್ಲಿ ಕೇರಳದ ವಿಶೇಷ ಪ್ರತಿನಿಧಿ ಕೆ.ವಿ. ಥಾಮಸ್ ಅವರು ವಯನಾಡ್ ಭೂಕುಸಿತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ನ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅಡಿಯಲ್ಲಿ ಯಾವುದೇ ವಿಪತ್ತುಗಳನ್ನು ಅಧಿಕೃತವಾಗಿ “ರಾಷ್ಟ್ರೀಯ ವಿಪತ್ತು” ಎಂದು ಹೆಸರಿಸಲು ಯಾವುದೇ ಅವಕಾಶವಿಲ್ಲ ಎಂದು ರಾಜ್ಯ ಸಚಿವ ನಿತ್ಯಾನಂದ ರೈ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Also Read  ಬಳ್ಪ: ತ್ರಿಶೂಲಿನೀ ದುರ್ಗಾಪರಮೇಶ್ವರಿ ಜಾತ್ರಾ ಆಮಂತ್ರಣ ಪತ್ರ, ಕ್ಯಾಲೆಂಡರ್ ಅನಾವರಣ

 

error: Content is protected !!
Scroll to Top