ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ- ವಾಹನ ಸಂಚಾರಕ್ಕೆ ತಡೆ

(ನ್ಯೂಸ್ ಕಡಬ) newskadaba.com . 14. ರಾಜೆಯ ಕಲ್ಬರ್ಪೆ ಬಳಿ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಗುರುವಾರ ರಾತ್ರಿ ಮರ ಬಿದ್ದ ಹಿನ್ನೆಲೆಯಲ್ಲಿ ರಸ್ತೆ ತಡೆ ಉಂಟಾಯಿತು. ಒಂದುವರೆ ಗಂಟೆಯ ಬಳಿಕ ಮರವನ್ನು ತೆರವುಗೊಳಿಸಿದ ಹಿನ್ನಲೆಯಲ್ಲಿ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತವಾಯಿತು.

ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಮಿಳುನಾಡು ಮೂಲದ ದೋಸ್ತ್ ವಾಹನವೊಂದು ಸಂಚಾರ ಮಾಡುತ್ತಿದ್ದ ಸಮಯದಲ್ಲಿಯೇ ಈ ಮರ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳೂ ಮರಿದು ಬಿದ್ದಿವೆ. ಕೆಲವು ಕಿ.ಮೀ ದೂರ ಒಂದುವರೆ ಗಂಟೆಗೂ ಅಧಿಕ ಸಮಯ ಟ್ರಾಫಿಕ್ ಜಾಮ್ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Also Read  ದಂಪತಿಗಳಲ್ಲಿ ಸಮಸ್ಯೆಯೇ? ಪರಿಹಾರ ಮತ್ತು ದಿನ ಭವಿಷ್ಯ

 

error: Content is protected !!
Scroll to Top