(ನ್ಯೂಸ್ ಕಡಬ) newskadaba.com ಕಾಫಿನಾಡು , ನ. 12. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಪ್ರಸಿದ್ಧ ತಾಣ ಮುಳ್ಳಯ್ಯನಗಿರಿಗೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ತೆರಳುತ್ತಾರೆ. ಒಂದು ಕಡೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ಪ್ರವಾಸಿಗರು ಪರದಾಡಿದರೆ, ಮತ್ತೊಂದೆಡೆ ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ ಪ್ರವಾಸಿಗರಿಗೆ ಶಾಕ್ ನೀಡುತ್ತಾ ಬಂದಿದೆ.
ಚಿಕ್ಕಮಗಳೂರು ತಾಲ್ಲೂಕು ಮುಳ್ಳಯ್ಯನಗಿರಿ ಪ್ರದೇಶದ ವ್ಯಾಪ್ತಿಯಲ್ಲಿ ಉಪಯೋಗಿಸಿ ಎಸೆಯುವಂತಹ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚಿಪ್ಸ್ ಪ್ಯಾಕೆಟ್‌ಗಳು, ಗುಟ್ಕಾ ಪ್ಯಾಕೆಟ್‌ಗಳು ಹಾಗೂ ಇದೇ ರೀತಿಯ ತಿನ್ನಲು ಯೋಗ್ಯವೆಂದು ಪ್ಯಾಕ್ ಮಾಡಿರುವಂತಹ ಇತರೆ ಪ್ಲಾಸ್ಟಿಕ್ ಪ್ಯಾಕೆಟ್‌ಗಳ ಕೊಂಡೊಯ್ಯುವಿಕೆ, ಬಳಕೆ ಮತ್ತು ಮಾರಾಟ ಮಾಡುವುದನ್ನು 2024ರ ಅಕ್ಟೋಬರ್ 20 ರವರೆಗೆ ನಿಷೇಧಿಸಲಾಗಿದ್ದ ಅವಧಿಯನ್ನು 2024ರ ಡಿಸೆಂಬರ್ 20ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಸಿ.ಎನ್. ಮೀನಾ ನಾಗರಾಜ ಅವರು ತಿಳಿಸಿದ್ದಾರೆ.