ಪರಿಹಾರ ಅರಣ್ಯೀಕರಣ: 25 ಸಾವಿರ ಸಸಿಗಳನ್ನು ನೆಟ್ಟ BMRCL

(ನ್ಯೂಸ್ ಕಡಬ) newskadaba.com ನ. 09.ಬೆಂಗಳೂರು: ಪರಿಹಾರ ಅರಣ್ಯೀಕರಣದ ಅಡಿಯಲ್ಲಿ 25,720 ಸಸಿಗಳನ್ನು ಬೆಂಗಳೂರು ಮೆಟ್ರೊ ರೈಲ್‌ ಕಾರ್ಪೊರೇಶನ್‌ ಲಿಮಿಟೆಡ್‌ನ (ಬಿಎಂಆರ್‌ಸಿಎಲ್‌) ನೆಟ್ಟಿದೆ. ಬಿಬಿಎಂಪಿ ಅರಣ್ಯ ವಿಭಾಗದ ಪ್ರಕಾರ, ಈಗ ಬೆಂಗಳೂರು ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೆಟ್ರೋ ಮೂಲಕ ಸಂಪರ್ಕ ಕಲ್ಪಿಸಲು ಮುಂದಾಗಿರುವ ಬಿಎಂಆರ್‌ಸಿಎಲ್‌ ಅದಕ್ಕಾಗಿ ಸಾವಿರಾರು ಮರಗಳನ್ನು ಕಡಿಯಬೇಕಾಗಿರುವುದರಿಂದ ಅದಕ್ಕೆ ಪರಿಹಾರವಾಗಿ ಅರಣ್ಯೀಕರಣವನ್ನು ಕೈಗೊಂಡಿದೆ.

ನಗರದಾದ್ಯಂತ ಸ್ಥಳಗಳನ್ನು ಗುರುತಿಸಲಾಗಿದ್ದು ಮೂರು ವಿಭಿನ್ನ ಹಂತಗಳಲ್ಲಿ, ಸ್ಥಳೀಯ ಮತ್ತು ಹವಾಮಾನವನ್ನು ತಡೆದುಕೊಳ್ಳುವ ಮರಗಳನ್ನು ನೆಡಲಾಗಿದೆ. ಬಿಬಿಎಂಪಿ ಅರಣ್ಯ ಇಲಾಖೆಯಿಂದ ಕಾಮಗಾರಿಯನ್ನು ಮೇಲ್ವಿಚಾರಣೆ ಮಾಡಲಾಯಿತು. ಯೋಜನೆಯನ್ನು ಜೂನ್ 2023ರಲ್ಲಿ ಪ್ರಾರಂಭಿಸಲಾಗಿದ್ದು 2023ರ ಸೆಪ್ಟೆಂಬರ್ ವರೆಗೆ 25,000ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಈಗ ಅವು ಉತ್ತಮವಾಗಿ ಬೆಳೆದಿದ್ದು, BMRCL ಅವುಗಳನ್ನು ಇನ್ನೂ ಎರಡು ವರ್ಷಗಳವರೆಗೆ ಮಾತ್ರ ನಿರ್ವಹಿಸುತ್ತದೆ ಎಂದು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ ಹೇಳಿದರು.

Also Read  ಕರೊನಾ ನಿಯಂತ್ರಣಕ್ಕೆ ಆದ್ಯತೆ ➤ ನೂತನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

 

error: Content is protected !!
Scroll to Top