ಮಂಗಳೂರು: ನವೆಂಬರ್ 10 ರಿಂದ ಪ್ರೈವೇಟ್ ಚಾಲೆಂಜ್ ನ ನಾಲ್ಕನೇ ಆವೃತ್ತಿ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 08. ಪುನಾರಾವರ್ತಿತ ಹಾಸ್ಯ ಶೈಲಿಗೆ ಹಚ್ಚಿಕೊಂಡಿದ್ದ ಪ್ರೇಕ್ಷಕರಿಗೆ ವಿನೂತನ ಹಾಗೂ ವಿಭಿನ್ನ ಹಾಸ್ಯದ ಮೂಲಕ ಜನಮನಗೆದ್ದ ದೈಜಿವರ್ಲ್ಡ್ ವಾಹಿನಿಯ ಪ್ರೈವೇಟ್ ಚಾಲೆಂಜ್ ನ ನಾಲ್ಕನೇ ಆವೃತ್ತಿಯು ಭಾನುವಾರ ನವೆಂಬರ್ 10 ರಿಂದ ಆರಂಭವಾಗಲಿದೆ.

ಕಲಾವಿದ ಜೋಡಿಗಳಾದ ಅರವಿಂದ ಬೋಳಾರ್ ಹಾಗೂ ವಾಲ್ಟರ್ ನಂದಳಿಕೆ ಜುಗಲ್ ಬಂಧಿಯು ಪ್ರೇಕ್ಷಕರ ಬೇಡಿಕೆಯ ಮೇರೆಗೆ ವಿದೇಶಗಳ ವೇದಿಕೆಯಲ್ಲೂ ಕರಾವಳಿ ಕರ್ನಾಟಕದ ಹೆಸರನ್ನು ರಾರಾಜಿಸುವಂತೆ ಮಾಡಿದ್ದಾರೆ. ಎಳೆ ಮಕ್ಕಳಿದಂದ ಹಿಡಿದು ವಯೋವೃದ್ದರ ತನಕ ಎಲ್ಲರ ಮನಮೆಚ್ಚಿದ ಕಾರ್ಯಕ್ರಮವಾಗಿರುವ ಪ್ರೈವೇಟ್ ಚಾಲೆಂಜ್, ತುಳು ಭಾಷೆಯ ಕಂಪನ್ನು ಪಸರಿಸಿದ ಜೊತೆಗೆ ಭಾಷಾತೀತವಾಗಿ ಎಲ್ಲರ ಮನಸೆಳೆದ ಬಹು ನಿರೀಕ್ಷಿತ ಹಾಸ್ಯ ಕಾರ್ಯಕ್ರಮವಾಗಿದೆ. ಇದೀಗ ನಾಲ್ಕನೇ ಆವೃತ್ತಿಯಲ್ಲಿ ವಿಭಿನ್ನ ಪಾತ್ರಗಳೊಂದಿಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವುದರೊಂದಿಗೆ ಎಲ್ಲರನ್ನು ನಕ್ಕು ನಗಿಸಲು ಮತ್ತೆ ಬಂದಿದೆ.

Also Read  ಲಂಚ ಪ್ರಕರಣ ➤ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಮತ್ತೊಂದು ಪ್ರಕರಣ ದಾಖಲು

 

error: Content is protected !!
Scroll to Top