’ಪ್ಯಾನ್ ವರ್ಲ್ಡ್ʼ ಸಿನಿಮಾ ಘೋಷಿಸಿದ ಶಾರೂಖ್ ಖಾನ್

(ನ್ಯೂಸ್ ಕಡಬ) newskadaba.com ಮುಂಬೈ, ನ. 07. ‘ಕಿಂಗ್’ ತಮ್ಮ ಮುಂದಿನ ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಘೋಷಿಸಿರುವ ಬಾಲಿವುಡ್ ನಟ ಶಾರೂಖ್ ಖಾನ್, ಜಾಗತಿಕ ಸಿನಿಮಾ ರಂಗದ ಮೇಲೆ ಭಾರತೀಯ ಸಿನಿಮಾಗಳ ಪ್ರಭಾವ ಹೆಚ್ಚುತ್ತಿದೆ ಎಂದು ಎಂದು ಹೇಳಿದ್ದಾರೆ.

ತಮ್ಮ ಜನ್ಮದಿನದ ಅಂಗವಾಗಿ ಮುಂಬೈ ನಗರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾರೂಖ್ ಖಾನ್, ತಮ್ಮ ಅಂತಾರಾಷ್ಟ್ರೀಯ ಯಶಸ್ಸಿಗೆ ತಮ್ಮ ಅಭಿಮಾನಿಗಳು ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು. ‘ಕಿಂಗ್’ ಚಿತ್ರವನ್ನು ಸುಜೋಯ್ ಘೋಷ್ ನಿರ್ದೇಶಿಸುತ್ತಿದ್ದು, 2026ರ ಮಧ್ಯಭಾಗದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಶಾರೂಖ್ ಖಾನ್ ತಮ್ಮ ಪುತ್ರಿ ಸುಹಾನಾ ಖಾನ್  ಹಾಗೂ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

Also Read  ಖ್ಯಾತ ನಟ ಸಾಯಿ ಧರ್ಮ ತೇಜ್ ಬೈಕ್ ಅಪಘಾತ ➤ ಟಾಲಿವುಡ್ ನಟ ಗಂಭೀರ

 

error: Content is protected !!
Scroll to Top