ಕುಂತೂರು: ಹೋಟೇಲ್‌ಗಳಿಗೆ ನುಗ್ಗಿದ ಕಳ್ಳರು ► ಚಿಲ್ಲರೆ ದುಡ್ಡಿನೊಂದಿಗೆ ಹರಿಕೆ‌ ಡಬ್ಬಿಯನ್ನು ಹೊತ್ತೊಯ್ದ ಕಳ್ಳರು

(ನ್ಯೂಸ್ ಕಡಬ) newskadaba.com ಕಡಬ, ಮಾ.22. ಠಾಣಾ ವ್ಯಾಪ್ತಿಯ ಕುಂತೂರು ಎಂಬಲ್ಲಿ ಹೊಟೇಲ್ ಗಳಿಗೆ ನುಗ್ಗಿರುವ ಪುಡಿಗಳ್ಳರು ತಮ್ಮ‌ ಕೈಚಳಕವನ್ನು ತೋರಿಸಿದ ಘಟನೆ ಬುಧವಾರ ರಾತ್ರಿ ವರದಿಯಾಗಿದೆ.

ಕುಂತೂರು ಪೇಟೆಯಲ್ಲಿರುವ ನಾಸಿರ್ ಎಂಬವರಿಗೆ ಸೇರಿದ ಹೊಟೇಲ್ ಗೆ ನುಗ್ಗಿದ ಕಳ್ಳರು ಸುಮಾರು ಹತ್ತು ಸಾವಿರದಷ್ಟು ನಗದು ಹಾಗೂ ಹರಿಕೆ ಡಬ್ಬಿಗಳನ್ನು ದೋಚಿದ್ದಾರೆ. ಪಕ್ಕದಲ್ಲಿನ ಮತ್ತೊಂದು ಹೊಟೇಲಿನಲ್ಲೂ ತಮ್ಮ ಕೈಚಳಕವನ್ನು ತೋರಿಸಿರುವ ಕಳ್ಳರು ಸಿಗರೇಟ್ ಪ್ಯಾಕೆಟ್ ಸೇರಿದಂತೆ ಚಿಲ್ಲರೆ ಹಣವನ್ನು ಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಇದು ಸ್ಥಳೀಯ ಯುವಕರ ಕೃತ್ಯವಾಗಿರಬಹುದೆಂದು ಶಂಕಿಸಲಾಗಿದೆ.

Also Read  ಕೊಕ್ಕಡ: ಯುವ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ► ಎಂಡೋಪೀಡಿತ ಯುವಕ ಮಹೇಶ್ ಮೃತ್ಯು

error: Content is protected !!
Scroll to Top