ಅಮಿತ್ ಶಾ ಮೇಲಿನ ಕೆನಡಾ ಆರೋಪ ಕಳವಳಕಾರಿಯಾಗಿದೆ: ಅಮೇರಿಕಾ

(ನ್ಯೂಸ್ ಕಡಬ)newskadaba.com,. 31 ವಾಷಿಂಗ್ಟನ್: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಕೆನಡಾ ಆರೋಪ ಕಳವಳಕಾರಿಯಾಗಿದ್ದು, ಈ ವಿಷಯದ ಕುರಿತು ಕೆನಡಾವನ್ನು ಸಂಪರ್ಕಿಸುವುದನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಬುಧವಾರ ಹೇಳಿದೆ.

ಖಾಲಿಸ್ತಾನಿ ಪ್ರತ್ಯೇಕತವಾದಿಗಳನ್ನು ಗುರಿಯಾಗಿಸಿಕೊಂಡು ನಡೆದಿರುವ ದಾಳಿಗಳ ಹಿಂದೆ ಅಮಿತ್ ಶಾ ಕೈವಾಡವಿದೆ ಎಂಬ ವಾಷಿಂಗ್ಟನ್ ಪೋಸ್ಟ್ ವರದಿಗಳನ್ನು ಕೆನಡಾದ ರಾಷ್ಟ್ರೀಯ ಭದ್ರತಾ ಮತ್ತು ಗುಪ್ತಚರ ಸಲಹೆಗಾರ ನಥಾಲಿ ಡ್ರೌಯಿನ್, ಉಪ ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಮಾರಿಸನ್  ಹಾಗೂ ಕೆನಡಾ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯರು ದೃಢಪಡಿಸಿದ್ದಾರೆ.

Also Read  ಕೊರೋನ ವೈರಸ್‌ಗೆ ಒಂದೇ ದಿನ ಅಮೆರಿಕಾದಲ್ಲಿ 2,600 ಜನ ಬಲಿ, ಸೋಂಕಿತರ ಪ್ರಮಾಣವೂ ಹೆಚ್ಚಳ


ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಮಾರಿಸನ್, “ನಾನೇ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಅಮಿತ್ ಶಾ ಹೆಸರನ್ನು ದೃಢಪಡಿಸಿದ್ದೆ. ನನಗೆ ಕರೆ ಮಾಡಿದ್ದ ಪತ್ರಕರ್ತರು, ಖಾಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ನಡೆದಿರುವ ದಾಳಿಗಳ ಹಿಂದೆ ಕೈವಾಡ ನಡೆಸಿರುವ ವ್ಯಕ್ತಿ ಅಮಿತ್ ಶಾರೇ ಎಂದು ಪ್ರಶ್ನಿಸಿದರು. ನಾನು ಹೌದೆಂದು ದೃಢಪಡಿಸಿದೆ” ಎಂದು ಹೇಳಿದ್ದಾರೆ.

error: Content is protected !!
Scroll to Top