ಶೂಟಿಂಗ್ ಮಾಡುವಂತಿಲ್ಲ, ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು; ದರ್ಶನ್ ಗೆ ಷರತ್ತು ವಿಧಿಸಿದ ಹೈಕೋರ್ಟ್..!

(ನ್ಯೂಸ್ ಕಡಬ) newskadaba.com ಅ. 30. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಪಾಲಾಗಿದ್ದ ನಟ ದರ್ಶನ್ ಅವರಿಗೆ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಇಂದು 6 ವಾರಗಳ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ.

ದರ್ಶನ್ ಅವರು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ದರ್ಶನ್‌ಗೆ ವೈದ್ಯಕೀಯ ವರದಿ ಆಧರಿಸಿಯೇ ಮಧ್ಯಂತರ ಜಾಮೀನು ನೀಡಲಾಗಿದೆ. ಹೀಗಾಗಿ, ದರ್ಶನ್ ಅವರು ಮಂಜೂರಾಗಿರುವ 6 ವಾರಗಳ ಜಾಮೀನನ್ನು ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕು.

ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡಿದ ಕೋರ್ಟ್ ನಂತರ ಕೆಲ ಷರತ್ತುಗಳನ್ನು ಹಾಕಿದ್ದು, ಅದರಂತೆ ದರ್ಶನ್ ಇಷ್ಟಪಟ್ಟ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬಹುದು. ಅಲ್ಲದೆ, ಒಂದು ವಾರಗಳಲ್ಲಿ ಚಿಕಿತ್ಸೆಯ ವಿವರವನ್ನು ಕೋರ್ಟ್​ ಗೆ ಸಲ್ಲಿಸಬೇಕು. ಪಾಸ್‌ ಪೋರ್ಟ್ ಅನ್ನು ಕೋರ್ಟ್​ ಗೆ ಸರೆಂಡರ್ ಮಾಡಬೇಕು. ಜೊತೆಗೆ ಶೂಂಟಿಂಗ್ ಮಾಡುವಂತಿಲ್ಲ ಎಂದು ದರ್ಶನ್‌ಗೆ ಸೂಚನೆ ನೀಡಿದೆ.

error: Content is protected !!
Scroll to Top