(ನ್ಯೂಸ್ ಕಡಬ)newskadaba.com, ಅ.28, ಹೊಸದಿಲ್ಲಿ: ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲಿ 10 ರೂ. ನಾಣ್ಯಗಳನ್ನು ಕೊಟ್ಟರೆ ಚಲಾವಣೆಯಲ್ಲಿಲ್ಲ ಎಂದು ಹೇಳುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ, ಕೆಲವೊಂದು ಅಂಗಡಿ ಮುಂಗಟ್ಟುಗಳಲ್ಲಿ ಈ 10 ರೂ. ನಾಣ್ಯ ಕೊಟ್ಟರೆ ಅವುಗಳನ್ನು ಪಡೆಯದೇ ವಾಪಸ್ ಕಳಿಸುತ್ತಾರೆ.
ಈ ನಾಣ್ಯಗಳು ಚಲಾವಣೆಯಲ್ಲಿಲ್ಲ ಎಂದು ನಿರ್ದಿಷ್ಟವಾಗಿ ಘೋಷಿಸಲಾಗಿಲ್ಲ. RBI ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವುದು ಮಹತ್ವದ್ದಾಗಿದೆ. 10 ರೂ. ನಾಣ್ಯಗಳನ್ನು ನೀಡಿದರೂ ತೆಗೆದುಕೊಳ್ಳಲು ಹಿಂಜರಿಯುವವರು ಬಹಳಷ್ಟು ಮಂದಿ. ನಾಣ್ಯ ಚಲಾವಣೆಯಲ್ಲಿಲ್ಲ ಎಂಬ ಪ್ರಚಾರ ನಡೆಯುತ್ತಿದೆ. ಹೀಗಾಗಿ, ಯಾರೇ 10 ರೂ. ನಾಣ್ಯವನ್ನು ಕೊಟ್ಟರೂ ಅದನ್ನು ಸ್ವೀಕಾರ ಮಾಡಬೇಕು. ಆದರೆ, ಈ ರೀತಿ ನಾಣ್ಯ ಸ್ವೀಕಾರ ಮಾಡದಿರುವುದು ಸರ್ಕಾರಕ್ಕೆ ಹಾಗೂ ಆರ್‌ಬಿಐಗೆ ಮುಜುಗರ ಉಂಟಾಗಿದೆ.