(ನ್ಯೂಸ್ ಕಡಬ)newskadaba.com, ಅ.28,ನವದೆಹಲಿ: ರಷ್ಯಾ ಜೊತೆಗಿನ ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸುವ ತಾಕತ್ತು ಇರುವುದು ಪ್ರಧಾನಿ ಮೋದಿಗೆ ಮಾತ್ರ. ಇದು ಭಾರತಕ್ಕೂ ಬಹಳ ಮಹತ್ವದ್ದಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತೊಮ್ಮೆ ಸಂಘರ್ಷ ನಿಲ್ಲಿಸುವ ಪ್ರಧಾನಿ ಮೋದಿ ಪಾತ್ರದ ಕುರಿತಂತೆ ಪುನರುಚ್ಚರಿಸಿದ್ದಾರೆ.
ಪ್ರಧಾನಿ ಮೋದಿಯವರು ಉಕ್ರೇನ್ ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆಗಳನ್ನು ಆಯೋಜಿಸುವ ಸಾಧ್ಯತೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಝೆಲೆನ್ಸ್ಕಿ ತಮ್ಮ ಬಲವಾದ ಸುಳಿವು ನೀಡಿದರು. ಭಾರತದಿಂದ ಇದು ನಿಸ್ಸಂದೇಹವಾಗಿ ಸಂಭವಿಸಬಹುದು ಮತ್ತು ಪ್ರಧಾನಿ ಮೋದಿ ಅವರು ಅದನ್ನು ನಿಜವಾಗಿ ಮಾಡಬಹುದು. ಈ ಶಾಂತಿ ಮಾತುಕತೆಯಲ್ಲಿ ಭಾರತದ ಮಧ್ಯಸ್ಥಿತಿಕೆ ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ಈ ಶಾಂತಿ ಮಾತುಕತೆಯನ್ನು ನವದೆಹಲಿ ಮಾಡಬೇಕು ಎಂದು ಹೇಳಿದ್ದಾರೆ. ಇದರ ಜತೆಗೆ ಈ ಶಾಂತಿ ಮಾತುಕತೆಯ ಸ್ವರೂಪವು ಉಕ್ರೇನ್‌ನ ಚೌಕಟ್ಟಿನೊಂದಿಗೆ ಹೊಂದಿಕೆಯಾಗಬೇಕು ಎಂದು ಹೇಳಿದ್ದಾರೆ. ಏಕೆಂದರೆ ಮೋದಿ ಭೇಟಿ ನಂತರ ಸಂಘರ್ಷ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.