ಭಟ್ಕಳ: ಹಿರಿಯ ಸಾಮಾಜಿಕ ಹೋರಾಟಗಾರ ನಿಧನ

(ನ್ಯೂಸ್ ಕಡಬ) newskadaba.com ಅ.26, ಭಟ್ಕಳ: ಭಟ್ಕಳದ ಹಿರಿಯ ಸಾಮಾಜಿಕ ಹೋರಾಟಗಾರ, ಎಸ್.ಜೆ. ಸೈಯದ್ ಖಾಲಿದ್ ರವರು ಶನಿವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಸುಮಾರು 28 ವರ್ಷಗಳ ಕಾಲ ಅಬುಧಾಬಿಯಲ್ಲಿ ಉದ್ಯೋಗಿಯಾಗಿದ್ದ ಸೈಯದ್ ಖಾಲಿದ್ ಅಲ್ಲಿ ನವಾಯತ್ ಸಮುದಾಯದ ಮರ್ಕಝಿ ಅನ್ ನವಾಯತ್ ಸಂಘಟನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಟ್ಕಳ ಮುಸ್ಲಿಮ್ ಜಮಾಅತೆ ಅಬುಧಾಬಿಯ ಎರಡು ಅವಧಿಯ ಕಾರ್ಯದರ್ಶಿಯಾಗಿ ಹಾಗೂ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಂಜುಮನ್, ರಾಬಿತಾ ಸೂಸೈಟಿ ಸೇರಿದಂತೆ ಹಲವಾರು ಸಂಘನೆಗಳಲ್ಲಲ್ಲಿ ಇವರು ತೊಡಗಿಸಿಕೊಂಡಿದ್ದರು
ಮೃತರ ಅಂತ್ಯ ಸಂಸ್ಕಾರವು ಇಂದು ರಾತ್ರಿ 10 ಗಂಟೆಗೆ ಭಟ್ಕಳ ಜುಮಾ ಮಸೀದಿಯ ಹಳೆಯ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Also Read  ಕೊಯಿಲ: ಪಶು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಕಳ್ಳತನ

 

error: Content is protected !!
Scroll to Top