ವಿಶ್ವಪ್ರಸಿದ್ಧ ತಿರುಪತಿಯಲ್ಲಿಯೂ ಬಾಂಬ್ ಬೆದರಿಕೆ..!

(ನ್ಯೂಸ್ ಕಡಬ) newskadaba.com .25, ತಿರುಪತಿ: ಕಳೆದ ಹಲವು ದಿನದಿಂದ ವಿಮಾನಗಳಲ್ಲಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗಿತ್ತು, ಆದರೆ ಈಗ  ಜಗತ್ಪ್ರಸಿದ್ಧ ದೇಗುಲವಾದ ತಿರುಪತಿಯಲ್ಲಿಯೂ ಬಾಂಬ್ ಬೆದರಿಕೆ ಕೇಳಿ ಬಂದಿದೆ.

ಆಂಧ್ರಪ್ರದೇಶದಲ್ಲಿರುವ ಈ  ತಿರುಪತಿ ದೇವಾಲಯದಲ್ಲಿ ಬಾಂಬ್ ಬೆದರಿಕೆ ಇರುವ ಬಗ್ಗೆ ಆಘಾತಕಾರಿ ದೂರು ಕೇಳಿ ಬಂದಿದ್ದು, ಈ ಬೆದರಿಕೆ ಬಂದ ನಂತರ ರಾಜ್ಯ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಲೀಲಾಮಹಾಲ್ ಬಳಿ ಮೂರು ಹೋಟೆಲ್‌ಗಳನ್ನು ಸ್ಫೋಟಿಸುವುದಾಗಿ ಬಾಂಬ್ ಇರಿಸಿರುವ ಬಗ್ಗೆ ಕರೆ ಮತ್ತು ಇಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಹೋಟೆಲ್‌ಗಳಲ್ಲಿ ಬಾಂಬ್‌ ಸ್ಫೋಟದ ಸುದ್ದಿ ತಿಳಿದ ತಕ್ಷಣ ತಿರುಪತಿ ಪೊಲೀಸರು ನಗರದ ಹೋಟೆಲ್‌ಗಳಲ್ಲಿ ತೀವ್ರ ಶೋಧ ನಡೆಸಿದ್ದಾರೆ. ಸದ್ಯ ಬೆದರಿಕೆ ಕರೆಗಳ ವಿವರಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ.

Also Read  ಸಾಲಮನ್ನಾ ಇಂದು ಫ್ಯಾಶನ್ ಆಗಿದೆ: ವೆಂಕಯ್ಯ ನಾಯ್ಡು ಲೇವಡಿ

error: Content is protected !!
Scroll to Top