ಐಟಿಐ ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಅ.24. ನಗರದ ಸರ್ಕಾರಿ ಐ.ಟಿ.ಐ, ಮಹಿಳಾ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಪಾಸಾದ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಸೀಟುಗಳು ಖಾಲಿಯಿದ್ದು,  ಕರ್ನಾಟಕದಲ್ಲಿ 5 ವರ್ಷ ವ್ಯಾಸಂಗ ಮಾಡಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅಕ್ಟೋಬರ್ 30ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.

ಎಲೆಕ್ಟ್ರೀಷಿಯನ್- 2 ವರ್ಷ, ಖಾಲಿ ಇರುವ ಸೀಟುಗಳು 6. ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 2 ವರ್ಷ, ಖಾಲಿ ಇರುವ ಸೀಟುಗಳು 18. ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ – 2 ವರ್ಷ, ಖಾಲಿ ಇರುವ ಸೀಟುಗಳು 7. ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ – 1ವರ್ಷ, ಖಾಲಿ ಇರುವ ಸೀಟುಗಳು 36. ಇಂಡಸ್ಟ್ರಿಯಲ್ ರೊಬೋಟಿಕ್ಸ್ ಆ್ಯಂಡ್ ಡಿಜಿಟಲ್ ಮ್ಯಾನುಪ್ಯಾಕ್ಚರಿಂಗ್ – 1ವರ್ಷ, ಖಾಲಿ ಇರುವ ಸೀಟುಗಳು 20. ಹೆಚ್ಚಿನ ಮಾಹಿತಿಗೆ ಸಂಸ್ಥೆಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 9880119147 / 9448858417 ಸಂಪರ್ಕಿಸುವಂತೆ ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top