ಗೋವಾದಲ್ಲಿ ತುಳು ಕೂಟ ಸ್ಥಾಪನೆ

(ನ್ಯೂಸ್ ಕಡಬ) newskadaba.com ಅ.23,  ಪಣಜಿ. ಗೋವಾದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ತುಳು ಭಾಷಿಕರಿದ್ದೀರಿ. ಗೋವಾದಲ್ಲಿ ತುಳಕೂಟ ಸ್ಥಪಾನೆಯಾಗಿರುವುದು ಹೆಮ್ಮೆಯ ಸಂಗತಿ. ತುಳಯ ಭಾಷಕರು ಜಗತ್ತಿನಾದ್ಯಂತ ನೆಲೆಸಿದ್ದಾರೆ. ಗೋವಾದಲ್ಲಿ ತುಳು ಭವನ ನಿರ್ಮಾಣ ಮಾಡಿ ಇದಕ್ಕೆ ನಮ್ಮೆಲ್ಲರ ಸಹಕಾರ ಇರಲಿದೆ ಎಂದು ಕಾರ್ಕಳ ಕ್ಷೇತ್ರದ  ಶಾಸಕ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಗೋವಾದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತುಳು ಕೂಟವನ್ನು ಅ.20ರಂದು ಭಾನುವಾರ ಸಂಜೆ ಗೋವಾ ರಾಜಧಾನಿ ಪಣಜಿ ಸಮೀಪ ಪರ್ವರಿಯ ಪುಂಡಲೀತ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಸಮಾರಂಭದ ಉದ್ಘಾಟನೆ ಮುಂದುವರೆದು ಮಾತನಾಡಿ ತುಳು ಭಾಷೆ ಪುರಾತನ ಭಾಷೆ. ಗೋವಾದಲ್ಲಿ ಗಣೇಶ್ ಶೆಟ್ಟಿ ನೇತೃತ್ವದಲ್ಲಿ ಉದ್ಘಾಟನೆಗೊಂಡ ತುಳು ಕೂಟಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Also Read  ಬೆಳ್ತಂಗಡಿ: 'ಜನಾರೋಗ್ಯವೇ ರಾಷ್ಟ್ರ ಶಕ್ತಿ' ಅಭಿಯಾನದಡಿ ಪಿಎಫ್ಐ ವತಿಯಿಂದ ಉಜಿರೆಯಲ್ಲಿ ಮ್ಯಾರಥಾನ್ ಹಾಗೂ ದೈಹಿಕ ಕಸರತ್ತು ಪ್ರದರ್ಶನ

ತುಳು ಕೂಟದ ಉದ್ಘಾಟನ ಸಮಾರಂಭದಲ್ಲಿ ಪುರಾತನ ವಸ್ತುಗಳ ವಸ್ತು ಪ್ರದರ್ಶನ ನಡೆಸಲಾಯಿತು. ರಾಜರು ಬಳಸಿದ ವಸ್ತುಗಳು, ನಗ-ನಾಣ್ಯಗಳ, ತುಳುನಾಡಿನ ಪುರಾತನ ವಸ್ತುಗಳ ಪ್ರದರ್ಶನ ನಡೆಸಲಾಯಿತು. ಶಿವಧೂತೆ ಗುಳಿಗೆ ಎಂಬ ಪ್ರಸಿದ್ಧ  ಪೌರಾಣಿಕ ನಾಟಕದ 650ನೇ ಪ್ರದರ್ಶನ ನಡೆಸಲಾಯಿತು. ಈ ನಾಟಕ ಜನರ ಮೆಚ್ಚುಗೆಗೆ ಕಾರಣವಾಯಿತು.

 

error: Content is protected !!
Scroll to Top