ಆಯುಷ್ ಆಸ್ಪತ್ರೆ: ಕ್ಷಾರಸೂತ್ರ ಚಿಕಿತ್ಸಾ ಅಭಿಯಾನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಅ.23. ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆಯ ವತಿಯಿಂದ ಮಂಗಳೂರಿನ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಮೂಲವ್ಯಾಧಿ, Piles, Fistula and Fissure ಇನ್ನಿತರ ಗುದಗತ ರೋಗಗಳಿಂದ ಬಳಲುತ್ತಿರುವಂತಹ ರೋಗಿಗಳ ಉಪಯೋಗಕ್ಕಾಗಿ ಆಯುರ್ವೇದದ ಯಶಸ್ವಿ ಶಸ್ತ್ರಚಿಕಿತ್ಸಾ ವಿಧಾನವಾದ ಕ್ಷಾರಸೂತ್ರ ಚಿಕಿತ್ಸಾ ಅಭಿಯಾನವನ್ನು ಜಿಲ್ಲೆಯ ಹೆಸರಾಂತ ಆಯುರ್ವೇದ ಶಸ್ತ್ರಚಿಕಿತ್ಸಕ ಡಾ.ರವಿಶಂಕರ್ ಪೆರುವಾಜೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್, ಬಡರೋಗಿಗಳಿಗೆ ಆಯುರ್ವೇದ ಚಿಕಿತ್ಸೆಗಳ ಉಪಯೋಗವನ್ನು ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಅಭಿಯಾನವನ್ನು ಪ್ರತೀ ತಿಂಗಳ 3ನೇ ಶುಕ್ರವಾರ ಜಿಲ್ಲಾ ಆಯುಷ್ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಿದರು. ಅಭಿಯಾನದ ಸಂಯೋಜಕರಾದ ಡಾ|ಶೋಭರಾಣಿ, ವೈದ್ಯಕೀಯ ಅಧೀಕ್ಷಕರಾದ  ಡಾ|ಝಾಹಿದ್ ಹುಸೈನ್ ಹಾಗೂ ಡಾ|ಶಶಿಕಾಂತ್ ಕಮ್ಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!
Scroll to Top