ಹಜ್ ಯಾತ್ರೆಗೆ ಮುಂಗಡ ಪಾವತಿ ಅವಧಿ ಅ.31ರ ತನಕ ವಿಸ್ತರಣೆ

(ನ್ಯೂಸ್ ಕಡಬ) newskadaba.com ಅ. 22. ಭಾರತದ ಹಜ್ ಕಮಿಟಿ ಮೂಲಕ ಮುಂದಿನ ವರ್ಷದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಆಯ್ಕೆಯಾದವರಿಗೆ ಮುಂಗಡವಾಗಿ ಮೊದಲ ಕಂತಿನ ಹಣ ಪಾವತಿಸಲು ಅವಕಾಶವನ್ನು ಅ. 31ರ ರಾತ್ರಿ 11:59ರ ತನಕ ವಿಸ್ತರಿಸಲಾಗಿದೆ.

ಈಗಾಗಲೇ ಹಜ್ ಯಾತ್ರೆಗೆ ತಾತ್ಕಾಲಿಕವಾಗಿ ಆಯ್ಕೆಯಾದವರು 1,30,300 ರೂ. ಮುಂಗಡ ಹಣದ ಮೊದಲ ಕಂತನ್ನು ಅ.21ರ
ಮೊದಲು ಪಾವತಿಸುವಂತೆ ಈ ಹಿಂದೆ ಹಜ್ ಕಮಿಟಿ ಆಫ್ ಇಂಡಿಯಾ ಅ.07ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿತ್ತು. ಆದರೆ, ಮೊದಲ ಕಂತು ಪಾವತಿ ದಿನಾಂಕವನ್ನು ವಿಸ್ತರಿಸುವಂತೆ ವಿವಿಧ ರಾಜ್ಯಗಳ ಹಜ್ ಕಮಿಟಿಗಳು ಮಾಡಿರುವ ಮನವಿಗೆ ಸ್ಪಂದಿಸಿರುವ ಹಜ್ ಕಮಿಟಿಯು ಇದೀಗ ಹಣ ಪಾವತಿಯ ಅವಧಿಯನ್ನು ವಿಸ್ತರಿಸಿರುವುದಾಗಿ ತಿಳಿದುಬಂದಿದೆ.

error: Content is protected !!
Scroll to Top