ಸಬಳೂರು: 34 ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣ ► ಸುಳ್ಯ ಶಾಸಕ ಅಂಗಾರರಿಂದ ಕಾಮಗಾರಿ ಪರಿಶೀಲನೆ



(ನ್ಯೂಸ್ ಕಡಬ) newskadaba.com ಕಡಬ, ಮಾ.18. ಕೊಯಿಲ ಗ್ರಾಮದ ಏಣಿತ್ತಡ್ಕ ಸಮೀಪದ ಸಬಳೂರು ಎಂಬಲ್ಲಿ ತೊಡಿಗೆ ಸುಳ್ಯ ಶಾಸಕರ ಅನುದಾನದಲ್ಲಿ ಸುಮಾರು 34 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಮತ್ತು ಸೇತುವೆಯ ಕಾಮಗಾರಿಯನ್ನು ಸುಳ್ಯ ಶಾಸಕ ಎಸ್.ಅಂಗಾರ ಭಾನುವಾರದಂದು ಪರಿಶೀಲನೆ ನಡೆಸಿದರು.







ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷˌ ವೆಂಕಟ್ ವಳಲಂಬೆ, ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಧರ್ಮಪಾಲ ರಾವ್ ಕಜೆ, ತಾ.ಪಂ. ಸದಸ್ಯರಾದ ತೇಜಶ್ವಿನಿ ಕಟ್ಟಪುಣಿ, ಜಯಂತಿˌ ರಾಮಕುಂಜ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಅರ್.ಕೆ., ಕೊಯಿಲ ಗ್ರಾ.ಪಂ. ಸದಸ್ಶರಾದ ತಿಮ್ಮಪ್ಪ, ಸುಂದರ ನಾಯ್ಕ, ಬಿಜೆಪಿ ಕೊಯಿಲ ಗ್ರಾಮ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯ್ಕ, ಮುಖಂಡರಾದ ಉಮೇಶ ಸಂಕೇಶ, ನಾಗೇಶ್ ಕಡೆಂಬ್ಯಾಲು, ಸ್ಥಳೀಯರಾದ ಶ್ವೇತ ಸಬಳೂರು ಉಪಸ್ಥಿತರಿದ್ದರು.






error: Content is protected !!
Scroll to Top