ಕೆಎಂಎಫ್ ನಿಂದ ಮತ್ತೊಂದು ಮೈಲಿಗಲ್ಲು; ದಿನಕ್ಕೆ 2.5ಕೋಟಿ ಲೀ. ಹಾಲು ಉತ್ಪಾದನೆ

(ನ್ಯೂಸ್ ಕಡಬ) newskadaba.com .21 ಬೆಂಗಳೂರು :  ಕೆಎಂಎಫ್ ವತಿಯಿಂದ ಪ್ರತಿದಿನ 2.5 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದು ಕೆಎಂಎಫ್ ಇತಿಹಾಸದಲ್ಲಿಯೇ ಬಹುದೊಡ್ಡ ಮೈಲಿಗಲ್ಲು ಎನ್ನಲಾಗಿದೆ. ಇದರಲ್ಲಿ ಒಂದು ಕೋಟಿ ಲೀಟರ್‌ ಹಾಲನ್ನು ಸ್ಥಳೀಯವಾಗಿ ಮಾರಾಟವಾಗುತ್ತಿದ್ದರೆ, ಇನ್ನೊಂದು ಕೋಟಿ ಲೀಟರ್‌ ಹಾಲನ್ನು ಕೆಎಂಎಫ್‌ ಉತ್ಪಾದಿಸುತ್ತದೆ. ಇನ್ನುಳಿದ 50ಸಾವಿರ ಲೀಟರ್‌ ಹಾಲನ್ನು ಖಾಸಗಿ ಡೈರಿಗಳು ಉತ್ಪಾದಿಸುತ್ತದೆ.

ರಾಜ್ಯದಲ್ಲಿ ಶೇ.80ರಷ್ಟು ಕೆಎಂಎಫ್‌ ಬ್ರ್ಯಾಂಡ್‌ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳೇ ಮಾರಾಟವಾಗುತ್ತಿದೆ. ಇನ್ನುಳಿದಂತೆ ದೊಡ್ಡ ದೊಡ್ಡ ಡೈರಿಗಳನ್ನು ನಡೆಸುತ್ತಿರುವ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಮತ್ತೊಂದೆಡೆ ಕೆಎಂಎಫ್‌ ದೇಸಿ ತಳಿಯ ಹಸುಗಳು ಮತ್ತು ಅದರ ಹಾಲನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಭಿಯಾನವನ್ನೂ ನಡೆಸಿದೆ. ಅಲ್ಲದೇ ಗುಜರಾತ್‌ನ ದೇಶಿಯ ʼಗಿರ್‌ʼ ತಳಿಯನ್ನೂ ಪೂರೈಕೆ ಮಾಡಲು ಮುಂದಾಗಿದೆ.

error: Content is protected !!

Join WhatsApp Group

WhatsApp Share