ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಇಬ್ರಾಹಿಂ ರಾಜ್ ಕಮಲ್, ಪ್ರ.ಕಾರ್ಯದರ್ಶಿಯಾಗಿ ಹಾಜಿ| ಮುಹಮ್ಮದ್ ರಫೀಕ್ ಆಯ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.18. ನೇರಳಕಟ್ಟೆ ಸಮೀಪದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರಾಜ್ ಕಮಲ್‌ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ರಫೀಕ್ ಎಸ್.ಎಂ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಪರ್ಲೊಟ್ಟು, ಕೋಶಾಧಿಕಾರಿಯಾಗಿ ಪಿ.ಕೆ. ಅಬ್ಬಾಸ್ ಪರ್ಲೊಟ್ಟು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಸ್.ಎಂ.ಮುಹಮ್ಮದ್ ಶಾಫಿ, ಹಮೀದ್ ಇನಾಮ್ ಮಾಣಿ, ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಹಾಜಿ ಮುಹಮ್ಮದ್ ಅಶ್ರಫ್ ಕೊಡಾಜೆ, ಇಬ್ರಾಹಿಂ ಕೆ. ಮಾಣಿ, ಹಾಜಿ ಇಬ್ರಾಹಿಂ ಪಂತಡ್ಕ, ಎಸ್.ಎಂ.ಎಸ್.ಇಬ್ರಾಹಿಂ ಅನಂತಾಡಿ, ಹಬೀಬ್ ಕೊಡಾಜೆ, ರವೂಫ್ ಕೊಡಾಜೆ, ಹಾಗೂ ಉಮ್ಮರ್ ಫಾರೂಕ್ ಪಾರ್ಪಕಜೆ ನೇಮಕಗೊಂಡರು. ಇಲ್ಲಿನ ತರ್ಬಿಯತುಲ್ ಇಸ್ಲಾಂ ಮದರಸದಲ್ಲಿ ಸಮಿತಿಯ ಗೌರವಾಧ್ಯಕ್ಷ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಸ್ಥಳೀಯ ಖತೀಬ್ ಹಾಜಿ ಪಿ.ಕೆ. ಆದಂ ದಾರಿಮಿ ಉಪಸ್ಥಿತರಿದ್ದರು.

Also Read  ಮಸೀದಿಯ ಗೇಟು ಹಾರಿ ಹರಕೆ ಡಬ್ಬಿ ಕಳ್ಳತನ..! ➤ ದೃಶ್ಯ ಸಿಸಿಟಿವಿಯಲ್ಲಿ ಸೆರೆ- ದೂರು ದಾಖಲು

error: Content is protected !!
Scroll to Top