ಸುಬ್ರಹ್ಮಣ್ಯ: ತಾಯಿ, ಮಗು ಆತ್ಮಹತ್ಯೆ ► ಎರಡು ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ



(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ.17. ಎರಡು ವರ್ಷದ ಮಗುವಿಗೆ ನೇಣಿಗೆ ಕೊಂದಿದ್ದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯದ ನಾಲ್ಕೂರು ಎಂಬಲ್ಲಿ ಶನಿವಾರದಂದು ನಡೆದಿದೆ.







ಆತ್ಮಹತ್ಯೆ ಮಾಡಿಕೊಂಡವರನ್ನು ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಸಮೀಪದ ಸಾಲ್ತಾಡಿ ನಿವಾಸಿ ಗಾರೆ ಕೆಲಸ ನಿರ್ವಹಿಸುತ್ತಿರುವ ಯತೀಂದ್ರ ಎಂಬವರ ಪತ್ನಿ ಶ್ರೀಮತಿ ಗೋಪಿ(30) ಹಾಗೂ ಎರಡು ವರ್ಷದ ಪುತ್ರಿ ಮನ್ವಿತಾ ಎಂದು ಗುರುತಿಸಲಾಗಿದೆ. ತನ್ನ ಹಿರಿಯ ಪುತ್ರಿ ಧನ್ವಿತಾಳನ್ನು ಅಂಗನವಾಡಿಗೆ ಕಳುಹಿಸಿ ಕಿರಿಯ ಪುತ್ರಿ ಮನ್ವಿತಾಳನ್ನು ನೇಣಿಗೇರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.






error: Content is protected !!
Scroll to Top