ಮತ್ತೆ ಚುರುಕುಗೊಂಡ ಮಳೆ- ತರಕಾರಿ ಬೆಲೆ ಮತ್ತಷ್ಟು ಹೆಚ್ಚಳ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 19. ರಾಜ್ಯದ ವಿವಿಧೆಡೆ ಹಿಂಗಾರು ಮಳೆ ಚುರುಕುಗೊಂಡಿದ್ದು, ಉತ್ಪಾದನೆ ಕುಂಠಿತವಾಗಿ ತರಕಾರಿಗಳ ಬೆಲೆ ಮತ್ತೆ ಗಗನಕ್ಕೇರಿದ್ದು, ದೀಪಾವಳಿ ಹಬ್ಬಕ್ಕೆ ಮತ್ತಷ್ಟು ತುಟ್ಟಿಯಾಗುವ ಸಾಧ್ಯತೆಗಳಿವೆ.

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಕೆಜಿಗೆ ಎಲ್ಲಾ ತರಕಾರಿಗಳ ಬೆಲೆ 10 ರೂ. ಏರಿಕೆಯಾಗಿದೆ. ಅದರಲ್ಲೂ ಲಾಟರಿ ಬೆಳೆ ಎಂದೇ ಕರೆಯುವ ಕೆಂಪು ಸುಂದರಿ ಬೆಲೆ\ಏರಿಕೆಯಾಗುತ್ತಲೆ ಇದೆ. ಮಳೆ ಹೆಚ್ಚಾದ ಕಾರಣ ಗಿಡದಲ್ಲಿ ಇದ್ದ ಟೊಮ್ಯಾಟೋ ನಾಶವಾಗಿದ್ದು ಬೆಲೆ ಹಚ್ಚಳವಾಗಿದೆ. ರಾಜ್ಯದಲ್ಲೇ ದೊಡ್ಡ ಮಾರುಕಟ್ಟೆಯಾದ ಕೋಲಾರ ಮಾರುಕಟ್ಟೆಯಿಂದ ರಾಜ್ಯ ಹಾಗೂ ಅಂತಾರಾಜ್ಯಗಳಿಗೆ ಟೊಮ್ಯಾಟೋ ಸರಬರಾಜು ಆಗುತ್ತದೆ.

Also Read  ಕಡಬ: ಆರು ತಿಂಗಳ ಹಿಂದಿನ ಹಿಟ್ & ರನ್ ಪ್ರಕರಣ ಭೇದಿಸಿದ ಪೊಲೀಸರು ➤ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲರ ಕಾರು ವಶಕ್ಕೆ

error: Content is protected !!
Scroll to Top