(ನ್ಯೂಸ್ ಕಡಬ) newskadaba.com ಅ.19, ಉಡುಪಿ: ಸೀಟಿನ ಕೆಳಗೆ ಶೇಖರಣೆಯಲ್ಲಿದ್ದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಕೂಟರ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಉಡುಪಿಯ ಚಿಟ್ಪಾಡಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಸ್ಕೂಟರ್ ಸವಾರ ಪೆಟ್ರೋಲ್ ಪಂಪ್‌ನಿಂದ ಬಾಟಲಿಯಲ್ಲಿ ಪೆಟ್ರೋಲ್ ಖರೀದಿಸಿ ವಾಹನದ ಸೀಟಿನ ಕೆಳಗೆ ಸಂಗ್ರಹಿಸಿದ್ದರು. ಬಳಿಕ ಅವರು ಸ್ಕೂಟರ್ ಅನ್ನು ಕಿಕ್-ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದು, ಇಂಜಿನ್‌ನಿಂದ ಸೋರಿಕೆಯಾದ ಕಿಡಿಯು ಸೀಟ್ ಕೆಳಗೆ ಸೋರಿಕೆಯಾಗಿದ್ದ ಪೆಟ್ರೋಲ್‌ಗೆ ತಾಗಿ ದ್ವಿಚಕ್ರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಘಟನೆಯಲ್ಲಿ ಸ್ಕೂಟರ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಈ ಘಟನೆ ಪೆಟ್ರೋಲ್ ಪಂಪ್ ಸಮೀಪದಲ್ಲಿ ಸಂಭವಿಸಿದ್ದು, ಪೆಟ್ರೋಲ್ ಪಂಪ್ ಸಿಬ್ಬಂದಿ ಮತ್ತು ಸ್ಥಳೀಯರು ತಕ್ಷಣ ಬೆಂಕಿ ನಂದಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿದೆ.