ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ, ಅಭಿವೃದ್ಧಿ ಸಂಸ್ಥೆಯ ಖಾಲಿ ಹುದ್ದೆ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಅ.18. ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ 371 (ಜೆ) ಅಡಿ ಖಾಲಿ ಇರುವ ಹಾಗೂ ಅಗತ್ಯ ಇರುವ 07 ಹುದ್ದೆಗಳನ್ನು (Job News) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆವಾರು ವಿದ್ಯಾರ್ಹತೆ ವಿವರ

ವಿಜ್ಞಾನಿ-ಬಿ: ಬಿಇ / ಬಿ.ಟೆಕ್ / ಬಿಎಸ್ಸಿ / ಎಂಎಸ್ಸಿ / ಇತರೆ ವಿದ್ಯಾರ್ಹತೆ., ಹಿರಿಯ ಸಂಶೋಧನಾ ಸಹಾಯಕರು : ಬಿಇ / ಬಿ.ಟೆಕ್ / ಬಿಎಸ್ಸಿ / ಎಂಎಸ್ಸಿ / ಇತರೆ ವಿದ್ಯಾರ್ಹತೆ., ದ್ವಿತೀಯ ದರ್ಜೆ ಸಹಾಯಕರು: ದ್ವಿತೀಯ ಪಿಯುಸಿ ಪಾಸ್.

ಸರ್ಕಾರಿ ಉದ್ಯೋಗ ಆಸಕ್ತರು ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧಿಕೃತ ವೆಬ್ಸೈಟ್ ವಿಳಾಸ www.kssrdi.karnataka.gov.in/kssrdi ಗೆ ಭೇಟಿ ನೀಡಿ, ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಳ್ಳಬೇಕು.

Also Read  ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಚಿಂತಾಜನಕ

ಅರ್ಜಿ ಸಲ್ಲಿಸುವ ವಿಧಾನ

ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯನ್ನು ಎಲ್ಲಾ ದಾಖಲಾತಿಗಳೊಂದಿಗೆ ದಿನಾಂಕ ಅಕ್ಟೋಬರ್‌ 30 ರ ಸಂಜೆ 4 ಗಂಟೆಯೊಳಗಾಗಿ ‘ನಿರ್ದೇಶಕರು, ಕ.ರಾ.ರೇ.ಸಂ.ಅ. ಸಂಸ್ಥೆ ತಲಘಟ್ಟಪುರ, ಕನಕಪುರ ಮುಖ್ಯ ರಸ್ತೆ, ಬೆಂಗಳೂರು-560109, ಇವರ ವಿಳಾಸಕ್ಕೆ ನೊಂದಾಯಿತ ಅಂಚೆ ಮೂಲಕ ಮಾತ್ರ ಮಾಹಿತಿಯನ್ನು ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

 

error: Content is protected !!