(ನ್ಯೂಸ್ ಕಡಬ) newskadaba.com ಉಡುಪಿ, ಮಾ.16. ಒಬ್ಬಳಲ್ಲ… ಇಬ್ಬರಲ್ಲ… ಬರೋಬ್ಬರಿ 11 ಯುವತಿಯರ ಜೊತೆ ಹೋಂ ಗಾರ್ಡ್ ಓರ್ವ ಇರುವಂತಹ ಸೆಲ್ಫೀ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರಿನಲ್ಲಿ, ಕಾಡಿನಲ್ಲಿ, ರೂಂನಲ್ಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ವಿವಿಧ ಯುವತಿಯರ ಜೊತೆ ಒಂಟಿ ಸೆಲ್ಫಿ ತೆಗೆದುಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಯುವಕನನ್ನು ಕಾರ್ಕಳ ತಾಲೂಕಿನ ಸುಜೀತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಉಡುಪಿ ಜಿಲ್ಲೆಯ ಶಿರ್ವ ಠಾಣೆಯಲ್ಲಿ ಕೆಲಸ ಹೋಂಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನೆಂಬ ಎಂಬ ಮಾಹಿತಿಯಿದ್ದು, ಅದಕ್ಕೆ ಪೂರಕವೆಂಬಂತೆ ಈತ ಠಾಣೆಯೊಳಗೆ ಇತರ ಪೊಲೀಸರ ಜೊತೆಗೆ ತೆಗೆದುಕೊಂಡ ಸೆಲ್ಫಿಯೂ ಹರಿದಾಡುತ್ತಿದೆ. ಆದರೆ ಯಾವುದೇ ಯುವತಿಯರು ಈವರೆಗೆ ಈತನ ವಿರುದ್ಧ ದೂರು ನೀಡಿಲ್ಲ. ಆದರೆ ಈ ಫೋಟೋಗಳು ಹೇಗೆ ಸಾಮಾಜಿಕ ಜಾಲತಾಣಗಳಿಗೆ ಹರಿದಾಡಿದೆ ಎಂಬುವುದು ಮಾತ್ರ ತಿಳಿದುಬಂದಿಲ್ಲ.