ನಾಳೆ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com  ಹೈದರಾಬಾದ್, ಅ. 17. ಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌  11ನೇ ಆವೃತ್ತಿಗೆ ನಾಳೆ ಅಧಿಕೃತ ಚಾಲನೆ ಸಿಗಲಿದೆ. ಇನ್ನು ಮೂರು ತಿಂಗಳುಗಳ ಕಾಲ ಕ್ರೀಡಾಭಿಮಾನಿಗಳಿಗೆ ಕಬಡ್ಡಿ ರಸದೌತಣವೂ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಯು ಮುಂಬಾ ಮುಖಾಮುಖಿಯಾಗಲಿವೆ. ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸಾರಗೊಳ್ಳಲಿದೆ.

ಟೂರ್ನಿಯಲ್ಲಿ ಒಟ್ಟು 12 ತಂಡಗಳು ಸೆಣಸಲಿವೆ. ಪಂದ್ಯಾವಳಿಯು ಅಕ್ಟೋಬರ್ 18ರಂದು ಆರಂಭವಾಗಿ ಡಿಸೆಂಬರ್ 24ರವರೆಗೆ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಹೈದರಾಬಾದ್‌ನಲ್ಲಿ ನಡೆದರೆ, ದ್ವಿತೀಯ ಮತ್ತು ಮೂರನೇ ಹಂತ ಕ್ರಮವಾಗಿ ನೋಯ್ಡಾ ಮತ್ತು ಪುಣೆಯಲ್ಲಿ ನಡೆಯಲಿವೆ.

Also Read   'ರಾಜ್ಯದಲ್ಲಿ 68,450 ಹೆಚ್ ಐವಿ ಪ್ರಕರಣ ದಾಖಲೆ'                ದಿನೇಶ್ ಗುಂಡೂರಾವ್  ಹೇಳಿಕೆ

 

error: Content is protected !!
Scroll to Top