ಕೃಷಿಕರಿಗೆ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ

(ನ್ಯೂಸ್ ಕಡಬ)newskadaba.com,. 17 ನವದೆಹಲಿ: ಕೇಂದ್ರ ಸರ್ಕಾರ, ರೈತರಿಗೆ ಬಂಪ‌ರ್ ಗಿಫ್ಟ್‌ ನೀಡಿದ್ದು, ಗೋಧಿ ಸೇರಿದಂತೆ ಪ್ರಮುಖ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚು ಮಾಡಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಹಂಗಾಮಿಗೆ ಮಾಡಲಾದ ಈ ಏರಿಕೆ ನಂತರ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು 150 ರು. ಹೆಚ್ಚಿಸಿದೆ. ಈ ಮೂಲಕ ಗೋಧಿ ಕ್ವಿಂಟಾಲ್‌ಗೆ 2275 ರೂ.ನಿಂದ 2425 ರೂ.ಗೆ ಏರಿಕೆಯಾಗಿದೆ. ಇದರ ಜೊತೆಗೆ ಸಾಸಿವೆಗೆ 300ರು.ನಷ್ಟು ಕನಿಷ್ಟ ಬೆಂಬಲ ಬೆಲೆಹೆಚ್ಚಿಸಲಾಗಿದ್ದು, ಕ್ವಿಂಟಾಲ್‌ಗೆ 5950ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಕುಸುಬೆ ದರವನ್ನು ಕ್ವಿಂಟಾಲ್‌ಗೆ 140 ರು. ಮಸೂರ್ ದಾಲ್ ಕ್ವಿಂಟಾಲ್‌ಗೆ 275, ಬಾರ್ಲಿ ದರ ಕ್ವಿಂಟಾಲ್‌ಗೆ 130 ರು., ಕಡಲೆ ದರ ಕ್ವಿಂಟಾಲ್‌ಗೆ 210 ರು.ನಷ್ಟು ಕನಿಷ್ಠ ಬೆಂಬಲ ಬೆಲೆ ಏರಿಕೆಯಾಗಿದೆ.

error: Content is protected !!

Join the Group

Join WhatsApp Group