ಷೇರಿನಲ್ಲಿ ಕೋಟ್ಯಾಂತರ ರೂ. ವಂಚನೆ: ಬ್ಯಾಂಕ್ ಮ್ಯಾನೇಜರ್ ಸೇರಿ 8 ಮಂದಿ ಬಂಧನ

(ನ್ಯೂಸ್ ಕಡಬ) newskadaba.com . 16. ಬೆಂಗಳೂರು: ಷೇರ್ ಟ್ರೇಡಿಂಗ್ ನಲ್ಲಿ ಅಧಿಕ ಲಾಭದಸೆ ತೋರಿಸಿ ಜನರಿಂದ ಹಣ ಪಡೆದು ವಂಚಿಸುವ ಜಾಲಕ್ಕೆ ಸಹಕರಿಸಿದ್ದ ಆರೋಪದ ಮೇರೆಗೆ ಖಾಸಗಿ ಬ್ಯಾಂಕ್’ನ ವ್ಯವಸ್ಥಾಪಕ ಸೇರಿ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್‌ಮೆನ್ ಮನೋಹರ್, ರಾಕೇಶ್, ಕಾರ್ತಿಕ್, ಅಕೌಂಟ್ ಹೋಲ್ಡರ್ ಕೆಂಚೇಗೌಡ, ರಘುರಾಜ್, ಲಕ್ಷ್ಮೀಕಾಂತ್, ಮಾಲಾ ಎಂದು ಗುರುತಿಸಲಾಗಿದೆ.ಆರೋಪಿಗಳು 1.5 ಕೋಟಿ ರೂ. ಹೂಡಿಕೆ ಮಾಡಿದ್ದ ಒಬ್ಬರಿಗೆ ವಂಚನೆ ಮಾಡಿದ್ದು, ತನಿಖೆ ಬಳಿಕ ಸೈಬರ್ ಕ್ರೈಂ ಠಾಣೆಯಲ್ಲಿ ಈ ವಿಚಾರವಾಗಿ 254ಕ್ಕೂ ಅಧಿಕ ದೂರುಗಳು ದಾಖಲಾಗಿರುವುದು ಪತ್ತೆಯಾಗಿದೆ.

ಯಲಹಂಕ ಮೂಲದ ವ್ಯಕ್ತಿಗೆ ಷೇರು ಟ್ರೇಡಿಂಗ್​ನಲ್ಲಿ ಹಣ ಹೂಡಿದರೆ ಹಣ ದ್ವಿಗುಣ ಮಾಡುವುದಾಗಿ ಆಮಿಷವೊಡ್ಡಿ ವಂಚಕರು ಆರಂಭದಲ್ಲಿ 50 ಸಾವಿರ ಕಟ್ಟಿಸಿಕೊಂಡಿದ್ದರು. ಹಣ ದ್ವಿಗುಣವಾಗಿದೆ ಎಂದು ವಾಟ್ಸ್​ಆ್ಯಪ್​ ಮಾಡಿ ಕಳೆದ ಮಾರ್ಚ್​ನಿಂದ ಜೂನ್ ವರೆಗೂ ಹಂತ-ಹಂತವಾಗಿ 1.50 ಕೋಟಿ ಪಾವತಿಸಿಕೊಂಡು ವಂಚಿಸಿದ್ದರು. ಬಳಿಕ ಉದ್ಯಮಿ ಹಣ ಡ್ರಾ ಮಾಡಲು ಮುಂದಾದಾಗ ರೂ.75 ಲಕ್ಷ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಉದ್ಯಮಿ ಈ ಸಂಬಂಧ ದೂರು ನೀಡಿದ್ದಾರೆ.

error: Content is protected !!

Join the Group

Join WhatsApp Group