ಮರಳಿ ಕ್ಯಾಂಪ್ ನತ್ತ ತೆರಳಿದ ದಸರಾ ಆನೆಗಳು..!

(ನ್ಯೂಸ್ ಕಡಬ) newskadaba.com ಅ. 15. ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ನವರಾತ್ರಿ ಆರಂಭಕ್ಕೂ ತಿಂಗಳುಗಳಿಗೂ ಮುನ್ನ ಶಿಬಿರದಿಂದ ಆನೆಗಳು ತಂಡೋಪತಂಡವಾಗಿ ಆಗಮಿಸುತ್ತವೆ. ಅದರೊಂದಿಗೆ ಅದರ ಮಾವುತರೂ ಹಾಜರಿರುತ್ತಾರೆ. ದಸರಾ ಮುಗಿಯುವವರೆಗೆ ಆನೆಗಳಿಗೆ ವಿಶೇಷ ಆಹಾರ ಹಾಗೂ ಕಾಳಜಿ ವಹಿಸಲಾಗುತ್ತದೆ. ಇದೀಗ ಅಂಬಾರಿ ಹೊತ್ತ ಅಭಿಮನ್ಯು ಸೇರಿದಂತೆ ಇತರ ಆನೆಗಳು ದಸರಾವನ್ನು ಯಶಸ್ವಿಯಾಗಿ ನಡೆಸಿ ಮತ್ತೆ ತಮ್ಮ‌ ತವರಿಗೆ ಮರಳಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಒಳಪಡುವ ಹುಣಸೂರು ಅರಣ್ಯ ವಿಭಾಗದ ಕೊಡಗಿನ ಮತ್ತಿಗೋಡು ಕ್ಯಾಂಪಿಗೆ ಒಳಪಡುವ ಕ್ಯಾಪ್ಟನ್ ಅಭಿಮನ್ಯು ಯಶಸ್ವಿಯಾಗಿ ತಾಯಿ ಚಾಮುಂಡಿ ಮೆರವಣಿಗೆ ಮುಗಿಸಿ ಮತ್ತೆ ತನ್ನ ಕ್ಯಾಂಪಿಗೆ ಹೊರಟಿದ್ದಾನೆ. ಕಳೆದ ಒಂದೂವರೆ ತಿಂಗಳಿನಿಂದ ಮೖಸೂರಿನ ವಾತಾವರಣಕ್ಕೆ ಒಗ್ಗಿದ್ದ ಅಂಬಾರಿ ತಂಡದ ಆನೆಗಳು ಲಾರಿ ಏರಿ ತಮ್ಮ ಕ್ಯಾಂಪಿಗೆ ಹೊರಡಲು ಹಿಂದೇಟು ಹಾಕಿದ್ದ ಆನೆಗಳ ನಡುವೆ ಕ್ಯಾಪ್ಟನ್ ಅಭಿಮನ್ಯು ತನಗೆ ಸಹಕರಿಸಿದ ಎಲ್ಲಾ ಪ್ರವಾಸಿಗರಿಗೆ ಸೆಲ್ಯೂಟ್ ಮಾಡಿ ಶಿಸ್ತಾಗಿ ಮತ್ತಿಗೋಡಿಗೆ ಪ್ರಯಾಣ ಬೆಳೆಸಿದೆ.

error: Content is protected !!

Join WhatsApp Group

WhatsApp Share