ಪೊಳಲಿ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ- ಸ್ಥಳೀಯರ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 15.  ಪೊಳಲಿಯ (ಅಡ್ಡೂರು) ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆಯಲ್ಲಿ ಘನವಾಹನ ಸಂಚಾರದ ಕುರಿತಂತೆ ಎರಡು ತಿಂಗಳು‌ ಕಳೆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಮತ್ತು ಪರ್ಯಾಯ ರಸ್ತೆಯ ವ್ಯವಸ್ಥೆಗೆ ಮುಂದಾಗದೆ ನಿರ್ಲಕ್ಷ್ಯತನ ತೋರಿದ ಜಿಲ್ಲಾಡಳಿತದ ವಿರುದ್ದ ಜನಾಕ್ರೋಶ ವ್ಯಕ್ತವಾದ ಬೆನ್ನಲೇ ಎಚ್ಚೆತ್ತ ಜಿಲ್ಲಾಡಳಿತ ಬಂಟ್ವಾಳ ತಹಶೀಲ್ದಾರರ ನೇತೃತ್ವದ ಅಧಿಕಾರಿಗಳ ದಂಡು ಸೋಮವಾರ ಪೊಳಲಿಗೆ ರವಾನಿಸಿ ಗ್ರಾಮಸ್ಥರ ಮನವೊಲಿಸಿದ್ದು, ಕೊನೆಗೂ ಇಂದು ನಡೆಯಬೇಕಾಗಿದ್ದ ಪ್ರತಿಭಟನೆಯನ್ನು ಹಿಂತೆಗೆಸುವಲ್ಲಿ ಯಶಸ್ವಿಯಾಗಿದೆ.

ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೋರಾಟ ಸಮಿತಿ‌ ಪದಾಧಿಕಾರಿಗಳಾದ ವೆಂಕಟೇಶ್ ನಾವುಡ ಪೊಳಲಿ, ಜಯರಾಮ್ ಕೃಷ್ಣ ಪೊಳಲಿ, ಅಬೂಬಕ್ಕರ್ ಅಮ್ಮುಂಜೆ , ಕಿಶೋರ್ ಪಲ್ಲಿಪಾಡಿ, ಲೋಕೇಶ್ ಪೊಳಲಿ, ಯು.ಪಿ.ಇಬ್ರಾಹಿಂ, ಚಂದ್ರಹಾಸ್ ಪಲ್ಲಿಪಾಡಿ, ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದರು. ಇದರಿಂದ‌ ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ ಬಂಟ್ವಾಳ ತಾಲೂಕು ಅಧಿಕಾರಿಗಳನ್ನು ಕಳಿಸಿಕೊಟ್ಟು ಸಂದಾನ ನಡೆಸಿದೆ.ಸದ್ಯ ಪರ್ಯಾಯ ರಸ್ತೆ ವ್ಯವಸ್ಥೆಗೆ ವಾರದ ಗಡುವು ನೀಡಿರುವ ಹೋರಾಟ ಸಮಿತಿ‌ಮತ್ತು ಗ್ರಾಮಸ್ಥರು ಈ ಅವಧಿಯೊಳಗೆ ವ್ಯವಸ್ಥೆಯಾಗದಿದ್ದರೆ‌ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

Also Read  Days Associated With Play 2024 Involves Playstation Store Ps Blog

 

error: Content is protected !!
Scroll to Top