ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ನಟ ಶಿವರಾಜ್‌ಕುಮಾರ್‌ ದಂಪತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 15. ತುಳುನಾಡಿನ ಕಾರ್ಣಿಕ ಶಕ್ತಿ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರ್‌ಗೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರು ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಕರಾವಳಿಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಆದರೆ ಇಲ್ಲಿಗೆ ಭೇಟಿ ನೀಡಿದಾಗ ಏನೋ ಒಂದು ನೆಮ್ಮದಿ ಸಿಗುತ್ತದೆ. ಕೊರಗಜ್ಜ ದೈವದ ಮೇಲೆ ನಂಬಿಕೆ ಇದೆ. ಜನರು ಕೂಡ ಈ ದೈವದ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದ್ದು, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದರು. ಈ ವೇಳೆ ಚಲನ ಚಿತ್ರ ನಿರ್ಮಾಪಕರಾದ ಕೆ.ಪಿ.ಶ್ರೀನಾಥ್, ರಾಜೇಶ್ ಭಟ್, ಕೀರ್ತನ್ ಪೂಜಾರಿ, ಶಿವರಾಜ್ ಕುಮಾರ್ ಅವರ ಸಂಬಂಧಿ ನಟರಾಜ್ , ಸ್ನೇಹಿತರಾದ ವಿಜಯಪ್ರಸಾದ್, ಶೇಖರ್, ಕೊರಗಜ್ಜ ಕ್ಷೇತ್ರದ ಆಡಳಿತ ಮೊಕ್ತೇಸರ ಪ್ರೀತಮ್ ಶೆಟ್ಟಿ, ಗಾಯಕ ಜಿತೇಶ್ ಕುಮಾರ್ ಉಪಸ್ಥಿತರಿದ್ದರು.

Also Read  ಕಾರಿನಲ್ಲಿ ಬಂದ ಮುಸುಕುಧಾರಿಗಳಿಂದ ಟೆಂಪೋ ಅಡ್ಡಗಟ್ಟಿ ನಗದು ದರೋಡೆ ➤ ವ್ಯಕ್ತಿಗೆ ತಲವಾರಿನಿಂದ ಹಲ್ಲೆ...!

 

error: Content is protected !!