ದೇಶದಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚಳ- ವರದಿ

(ನ್ಯೂಸ್ ಕಡಬ) newskadaba.com ಅ. 15. ಭಾರತದಲ್ಲಿ ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಪುರುಷರಲ್ಲಿ ಬಾಯಿ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

 

ಈ ಕುರಿತಂತೆ ಭಾರತ, ಬ್ರೆಜಿಲ್‌, ರಷ್ಯಾ, ಚೀನ ಮತ್ತು ದ.ಆಫ್ರಿಕಾಗಳಿರುವ ಬ್ರಿಕ್ಸ್‌ ರಾಷ್ಟ್ರಗಳಲ್ಲಿ ಕ್ಯಾನ್ಸರ್‌ ಪ್ರಕರಣಗಳ ಕುರಿತು ನಡೆದಿರುವ ತುಲನಾತ್ಮಕ ಅಧ್ಯಯನದ ವರದಿ ಇಕ್ಯಾನ್ಸರ್‌ ಜರ್ನಲ್‌ ನಲ್ಲಿ ಪ್ರಕಟವಾಗಿದೆ. ವಿಶ್ವದ 42 ಪ್ರತಿಶತ ಕ್ಯಾನ್ಸರ್‌ ಸಾವುಗಳು ಬ್ರಿಕ್ಸ್‌ ರಾಷ್ಟಗಳಲ್ಲೇ ಆಗಿದ್ದು, ಭಾರತದಲ್ಲಿ ಸ್ತನ ಕ್ಯಾನ್ಸರ್‌ ಅತೀ ಹೆಚ್ಚು ಸಾವಿಗೆ ಕಾರಣವಾಗಿದ್ದರೆ, ಇತರೆ ಬ್ರಿಕ್ಸ್‌ ರಾಷ್ಟ್ರಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಕಾರಣವಾಗಿದೆ. 2022ರಿಂದ 2045ರ ವೇಳೆಗೆ ಭಾರತ ಮತ್ತು ದ.ಆಫ್ರಿಕಾಗಳಲ್ಲಿ ಕ್ಯಾನ್ಸರ್‌ ಹೆಚ್ಚಳವಾಗಬಹುದು ಎಂದು ವರದಿ ಎಚ್ಚರಿಸಿದೆ.

Also Read  ಬೆಂಕಿ ಅವಘಡ… ➤ ಐವರು ಮಕ್ಕಳು ಮತ್ತು ಪೋಷಕರು ಮೃತ್ಯು

error: Content is protected !!
Scroll to Top