(ನ್ಯೂಸ್ ಕಡಬ) newskadaba.com ಥಾಣೆ, ಅ. 15. ವಾರ್ಷಿಕ ಇನ್‌ಕ್ರಿಮೆಂಟ್ ಮರು ಪಾವತಿಗಾಗಿ ನೌಕರನಿಂದ 1.10 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪ್ರಸಿದ್ಧ ಶಿಕ್ಷಣ ಸಂಸ್ಥೆಯೊಂದರ ನಿರ್ದೇಶಕರನ್ನು ಭ್ರಷ್ಟಾಚಾರ ನಿಗ್ರಹ ದಳವು ಬಂಧಿಸಿದೆ.
ಶಹಾಪುರ ತಾಲೂಕಿನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಹಾಗೂ ಜಂಟಿ ಕಾರ್ಯದರ್ಶಿಯಾಗಿರುವ ಆರೋಪಿ ಹಣದ ಬೇಡಿಕೆ ಇಟ್ಟು ಸುಮಾರು ಎರಡು ವರ್ಷಗಳವರೆಗೆ ತಡೆಹಿಡಿದಿದ್ದ ಎಂದು ಎಸಿಬಿ ಉಪ ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಸೋಂಕೆ ತಿಳಿಸಿದ್ದಾರೆ. ಪರಿಶೀಲಿಸಿ ಕಾರ್ಯಾಚರಣೆಗೆ ಮುಂದಾಗಿ ಖಿನಾವಲಿ ಪ್ರದೇಶದ ಶಾಲೆಯೊಂದರ ಸಮೀಪ ಬಸ್ ನಿಲ್ದಾಣದಲ್ಲಿ ದೂರುದಾರರಿಂದ 1.10 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಆರೋಪಿಯನ್ನು ಎಸಿಬಿ ಬಲೆ ಬೀಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.