(ನ್ಯೂಸ್ ಕಡಬ) newskadaba.com ಅ. 12. ಸೆಂಟ್ರಿಂಗ್ ಮಿಲ್ಲರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೋರ್ವ ಯಂತ್ರಕ್ಕೆ ಕೈಸಿಲುಕಿ ಬಲದ ಕೈಕಳೆದುಕೊಂಡು ಕೂಲಿ ಕೆಲಸ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದು, ಅಸಾಯಕರಾಗಿ ಸಾರ್ವಜನಿಕರಿಂದ ಧನ ಸಹಾಯದ ನಿರೀಕ್ಷೆಯಲಿದ್ದಾರೆ.
ಕಡಬ ತಾಲೂಕು ಹಳೆನೇರಂಕಿ ಗ್ರಾಮದ ಕಲ್ಲೇರಿಯ ನಿವಾಸಿ ಓಮರಾ ಎಂಬವರ ಪುತ್ರ ರವಿಚಂದ್ರ ಈಗ ಸಾರ್ವಜನಿಕರ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಇವರು ಕೂಲಿ ಕಾರ್ಮಿಕನಾಗಿ ಸೆಂಟ್ರಿಂಗ್ ಕೆಲಸದಲ್ಲಿ ಮಿಲ್ಲರ್ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಮೇ 17ನೇ 2024 ರಂದು ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಂಕ್ರೀಟ್ ಮಿಲ್ಲರ್ ಗೆ ಅನಾಚಕ್ ಆಗಿ ನನ್ನ ಬಲದ ಕೈ ಸಿಲುಕಿ ಕೈ ಮುಂಗೈಯಿಂದಲೇ ತುಂಡಾಗಿ ಹೋಗಿದೆ. ಇದೀಗ ಇವರಿಗೆ ಬೇರೆ ಯಾವುದೇ ಕೂಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೈಯ ಚಿಕಿತ್ಸಾ ವೆಚ್ಚ ಸೇರಿದಂತೆ ಇತರ ಖರ್ಚುಗಳಿಂದಾಗಿ ಸಾಲ ಮಾಡಿ ಹೈರಾಣಾಗಿರುವ ಇವರು ಹಣಕಾಸು ತೊಂದರೆಗೆ ಒಳಗಾಗಿ ಜೀವನ ನಿರ್ವಹಣೆ ಮಾಡಲು ಹೆಣಗಾಡುತ್ತಿದ್ದಾರೆ. ಕೈ ಕಳೆದುಕೊಂಡ ಇವರಿಗೆ ಯಾವುದೇ ವಿಮಾ ಪರಿಹಾರ ಕೂಡಾ ಸಿಕ್ಕಿರುವುದಿಲ್ಲ. ಪತ್ನಿ ಹಾಗೂ ಏಳು ವರ್ಷದ ಮಗಳೊಂದಿಗೆ ಜೀವನ ನಡೆಸುತ್ತಿರುವ ಇವರ ಸಮಸ್ಯಗೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ. ಅಸಾಯಕನಾಗಿರುವ ರವಿಚಂದ್ರ ಕುಟುಂಬಕ್ಕೆ ಸಹೃದಯಿ ದಾನಿಗಳು ಉದಾರ ಮನಸ್ಸಿನಿಂದ ಆಲಂಕಾರು ಶಾಖೆಯ ಕೆನರಾ ಬ್ಯಾಂಕ್‍ನ ಬ್ಯಾಂಕ್ ಖಾತೆಗೆ ( ಎಸ್‍ಬಿ ಖಾತೆ ಸಂಖ್ಯೆ ) ಹಣ ಸಂದಾಯ ಮಾಡಬೇಕೆಂದು ಕೋರಿದ್ದಾರೆ.