ಅನ್ನಭಾಗ್ಯ ಯೋಜನೆಯ ಶೇ20 ರಷ್ಟು ಪುರುಷರಿಗೆ ವೆಚ್ಚ

(ನ್ಯೂಸ್ ಕಡಬ)newskadaba.com,. 12 ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆ ಯೋಜನೆ-ಡಿಬಿಟಿ ಕುರಿತ ಇತ್ತೀಚಿನ ಅಧ್ಯಯನಗಳು ಕಳವಳಕಾರಿಯಾಗಿವೆ.

ಅನ್ನ ಭಾಗ್ಯ ಯೋಜನೆಯ ನಗದನ್ನು ಮನೆಯವರು ಶಿಕ್ಷಣ, ಆರೋಗ್ಯ ರಕ್ಷಣೆ, ಸಾಲ ಮರುಪಾವತಿ, ಗುಣಮಟ್ಟದ ಧಾನ್ಯ ಖರೀದಿ ಮತ್ತಿತರ ಅಗತ್ಯಗಳಿಗಾಗಿ ಬಳಸಿಕೊಂಡರೂ ನಗರ ಮತ್ತು ಗ್ರಾಮೀಣ ಪ್ರದೇಶದ ಪುರುಷರು ಸರಿ ಸುಮಾರು ಶೇ. 20 ರಷ್ಟು ಹಣವನ್ನು ಹೆಂಡತಿಗೆ ತಿಳಿಯದಂತೆ ಕುಡಿತ ಮತ್ತು ಧೂಮಪಾನಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ತಿಳಿದುಬಂದಿದೆ. ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಟುಂಬಗಳು ತಿಂಗಳಿಗೆ ಸರಾಸರಿ 576 ರೂ. ಪಡೆಯುತ್ತಾರೆ, ಆದರೆ ನಗರ ಪ್ರದೇಶದ ಕುಟುಂಬಗಳು ರೂ. 583 ಪಡೆಯುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸರಿಸುಮಾರು ಶೇ. 77 ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ. 82 ರಷ್ಟು ಹಣವನ್ನು ಧಾನ್ಯ ಖರೀದಿಸಲು ಖರ್ಚು ಮಾಡಲಾಗಿದೆ. ಉಳಿದ ಹಣವನ್ನು ಕುಡಿತ, ಸ್ಮೋಕಿಂಗ್ ಮತ್ತಿತರ ಇತರ ಉದ್ದೇಶಗಳಿಗೆ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗಿದೆ.

error: Content is protected !!

Join the Group

Join WhatsApp Group