ಬಾಂಗ್ಲಾದ ಜೇಶೋರೇಶ್ವರಿ ದೇವಳದ ಕಾಳಿದೇವಿಗೆ ಮೋದಿ ನೀಡಿದ ಕಿರೀಟ ಕಳವು

(ನ್ಯೂಸ್ ಕಡಬ)newskadaba.com,. 11ಢಾಕಾ: 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದ ಸತ್ಖಿರಾ ನಗರದ ಶ್ಯಾಮನಗರದಲ್ಲಿರುವ ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಚಿನ್ನದ ಕಿರೀಟ ಕಳವಾಗಿದೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ನರೇಂದ್ರ ಮೋದಿ ಜೇಶೋರೇಶ್ವರಿ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಚಿನ್ನ ಮತ್ತು ಬೆಳ್ಳಿಯಿಂದ ಮಾಡಿದ ಈ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಅಕ್ಟೋಬರ್‌ 10 ರಂದು ತಡರಾತ್ರಿ ಸುಮಾರು 2 ಗಂಟೆಗೆ ಕಿರೀಟವನ್ನು ಕಳವು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೇವಸ್ಥಾನದ ಅರ್ಚಕ ದಿಲೀಪ್‌ ಮುಖರ್ಜಿ ಪೂಜೆ ಸಲ್ಲಿಸಿ ಬಾಗಿಲು ಹಾಕಿ ತೆರಳಿದ ನಂತರ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

Also Read  ಕಡಬದಲ್ಲಿ ಮತ್ತೆ ಕೊರೋನಾ ಸದ್ದು ➤ 21 ವರ್ಷದ ಯುವಕನಲ್ಲಿ ಕೊರೋನಾ ದೃಢ

error: Content is protected !!
Scroll to Top