ಭೂ ದಾಖಲೆ ಆಡಿಟ್; ಕಂದಾಯ ಇಲಾಖೆಯಿಂದ ಹೊಸ ಸಾಫ್ಟ್ ವೇರ್ ಅಭಿವೃದ್ದಿ

(ನ್ಯೂಸ್ ಕಡಬ)newskadaba.com, ಅ.10 ಬೆಂಗಳೂರು: ಭೂ ದಾಖಲೆಗಳ ವಾಸ್ತವ ಸ್ಥಿತಿಯನ್ನು ತಿಳಿಯಲು ಕಂದಾಯ ಇಲಾಖೆಯು ಪುರಾತನವಾದ ವಿಧಾನವನ್ನು ನವೀಕರಿಸುತ್ತಿದೆ. ಸಾಂಪ್ರದಾಯಿಕ ವಿಧಾನವನ್ನು ಇತ್ತೀಚಿನ ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಲಾಗುತ್ತಿದೆ.

ಲ್ಯಾಂಡ್ ಬೀಟ್ (ಜಮೀನು ಗಸ್ತು ) ವ್ಯವಸ್ಥೆಯನ್ನು ಮರಳಿ ತರಲಾಗುತ್ತಿದ್ದು, ಜಿಲ್ಲೆ ಮತ್ತು ಗ್ರಾಮ ಮಟ್ಟದಲ್ಲಿ ಪ್ರತಿ ಭೂಮಿಯ ವಿವರಗಳನ್ನು ತಿಳಿಯಲು ಹೊಸ ‘ಜಮಾಬಂದಿ’ ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಒತ್ತುವರಿ ಪ್ರಕರಣಗಳು ಮತ್ತು ಭೂ ಹಕ್ಕುಗಳ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಇದನ್ನು ಮಾಡಲಾಗುತ್ತಿದೆ.ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ 6,000 ಎಕರೆ ಜಮೀನು ಪರಿಶೀಲನೆಗೆ ಒಳಪಟ್ಟಿದೆ. ಲ್ಯಾಂಡ್ ಬೀಟ್ ವ್ಯವಸ್ಥೆಯಲ್ಲಿ ಅಲ್ಲಿನ ಸಿಬ್ಬಂದಿ ಸೂಕ್ಷ್ಮ ಪ್ರದೇಶಗಳು ಮತ್ತು ಪಾಯಿಂಟ್‌ಗಳನ್ನು ಪರಿಶೀಲಿಸುತ್ತಾರೆ. ಆದರೆ ಕಾಲಾನಂತರದಲ್ಲಿ ಇದು ನಿಂತು ಹೋಗಿತ್ತು. ಭೂ ಬದಲಾವಣೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅದನ್ನು ಮರಳಿ ತರುವ ಅವಶ್ಯಕತೆಯಿದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

error: Content is protected !!

Join WhatsApp Group

WhatsApp Share