ಕೇರಳದ 25 ಕೋಟಿ ರೂ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್

(ನ್ಯೂಸ್ ಕಡಬ)newskadaba.com, . 09ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರದ ಬೈಕ್ ಮೆಕ್ಯಾನಿಕ್‌ ಅಲ್ತಾಫ್‌ಗೆ ಕೇರಳದ ಓಣಂ ಹಬ್ಬದ 25 ಕೋಟಿ ರೂ. ಮೌಲ್ಯದ ಲಾಟರಿ ಹೊಡೆದಿದೆ. ಈ ಮೂಲಕ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮಂಡ್ಯದ ವ್ಯಕ್ತಿ ಇದೀಗ ರಾತ್ರೋ ರಾತ್ರಿ ಕೋಟ್ಯಾಧಿಪತಿ ಆಗಿದ್ದಾರೆ. ಲಾಟರಿಯಲ್ಲಿ‌ 25 ಕೋಟಿ ರೂ. ಬಹುಮಾನವನ್ನು ಪಡೆದಿದ್ದಾರೆ.

ಇವರು ಕೇರಳ‌ ರಾಜ್ಯ ಲಾಟರಿಯಲ್ಲಿ 25 ಕೋಟಿ ರೂ. ಗೆದ್ದ ಅಲ್ತಾಫ್ ಪಾಷಾ ಅವರು ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣ ನಿವಾಸಿ ಆಗಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿರುವ ಅಲ್ತಾಫ್, ಮೊನ್ನೆ ‌ಪರಿಚಯಸ್ತರ ಮೂಲಕ ಕೇರಳ ರಾಜ್ಯದ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ‌ಗೆದ್ದಿದ್ದಾರೆ. ಇದೀಗ ಅಲ್ತಾಫ್ ಕೇರಳಕ್ಕೆ ‌ಪ್ರಯಾಣ ಮಾಡಿದ್ದು, ಲಾಟರಿ ಹಣ ಪಡೆಯುವ ಪ್ರಕ್ರಿಯೆಯನ್ನು ಪೂರೈಸಿ ಹಣವನ್ನು ಪಡೆದುಕೊಳ್ಳಲಿದ್ದಾರೆ. ಇದೀಗ ರಾಜ್ಯದಲ್ಲಿ ದಸರಾ ಹಬ್ಬದ ಆಚರಣೆಯಲ್ಲಿದ್ದ ಅಲ್ತಾಫ್‌ಗೆ ದೊಡ್ಡ ಉಡುಗೊರೆಯೇ ಸಿಕ್ಕಂತಾಗಿದೆ. ಬಹುಮಾನ ಮೊತ್ತ ಪೂರ್ತಿ ಸಿಗುತ್ತದೆಯೇ ಅಥವಾ ಕಡಿಮೆಯಾಗುತ್ತದೆಯೇ ಎಂಬುದೇ ಪ್ರಶ್ನೆಯೂ ಇರುತ್ತದೆ. ಇಲ್ಲಿ 25 ಕೋಟಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ಇದು ಓಣಂ ಬಂಪರ್ ಮೊತ್ತವಲ್ಲ, ದಿನನಿತ್ಯದ ಲಾಟರಿಗಳಾಗಿದ್ದರೂ ಬಹುಮಾನ ಮೊತ್ತ ಪೂರ್ತಿ ಅದೃಷ್ಟವಂತರ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಓಣಂ ಬಂಪರ್ ವಿಷಯದಲ್ಲಿ, 25 ಕೋಟಿಯಲ್ಲಿ 12 ಕೋಟಿ ರೂ.ಗಳು ಮಾತ್ರ ಲಾಟರಿ ಟಿಕೆಟ್ ಹಾರಿದ ಅದೃಷ್ಟವಂತರಿಗೆ ಸಿಗುತ್ತದೆ.

Also Read  ಜಗತ್ತಿನಾದ್ಯಂತ ಕೊರೋನಾ ಮಹಾಮಾರಿ ಮತ್ತೆ ಆರ್ಭಟ

error: Content is protected !!
Scroll to Top