ಕೈಕಂಬ: ಭಾಗ್ಯ ರಕ್ಷಿತಾರಣ್ಯದಲ್ಲಿ ಕಾಡ್ಗಿಚ್ಚು ► ಎಕರೆ ಗಟ್ಟಲೆ ಅರಣ್ಯ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ಕಡಬ, ಮಾ.14. ಕೈಕಂಬ ಸಮೀಪದ ಭಾಗ್ಯ ರಕ್ಷಿತಾರಣ್ಯದಲ್ಲಿ ಮಂಗಳವಾರದಿಂದ ಕಾಡ್ಗಿಚ್ಚು ಹರಡಿದ್ದು, ಎಕರೆಗಟ್ಟಲೆ ಅರಣ್ಯ ಭೂಮಿ ಬೆಂಕಿಗಾಹುತಿಯಾಗಿವೆ.

ಹೆದ್ದಾರಿಯಿಂದ ಏಳೆಂಟು ಕಿಲೋಮೀಟರ್ ದೂರದಲ್ಲಿರುವ ಭಾಗ್ಯ ರಕ್ಷಿತಾರಣ್ಯದ ಮೂಲೆಮನೆ ಎಂಬಲ್ಲಿ ಮಂಗಳವಾರದಂದು ಆರಂಭವಾದ ಕಾಡ್ಗಿಚ್ಚನ್ನು ರಾತ್ರಿ ವೇಳೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಊರವರ ಸಹಕಾರದೊಂದಿಗೆ ಹತೋಟಿಗೆ ತಂದಿದ್ದರೆನ್ನಲಾಗಿದೆ. ಬುಧವಾರದಂದು ಬೆಳಗ್ಗಿನ ಜಾವ ಕಾಡ್ಗಿಚ್ಚು ಮುಂದುವರಿದಿದ್ದು, ಎಕರೆಗಟ್ಟಲೆ ಪ್ರದೇಶ ಬೆಂಕಿಗೆ ಆಹುತಿಯಾಗಿವೆ. 40 ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಊರವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಸಂಜೆ ವೇಳೆಗೆ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ಮುಗಿಯಬಹುದೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ತಿಳಿಸಿದ್ದಾರೆ.

Also Read  ಕೊಂಬಾರು: ಅಗ್ನಿವೀರ ಪುನೀತ್ ರಾಜ್ ಗೆ ಸನ್ಮಾನ

error: Content is protected !!
Scroll to Top