ರತನ್‌ ಟಾಟಾ ಪರಂಪರೆ ಮುಂದುವರಿಸಿಕೊಂಡು ಹೋಗಲು ಟಾಟಾ ಟ್ರಸ್ಟ್ ಅವಿರತವಾಗಿ ಶ್ರಮಿಸಲಿದೆ -ಮುಖ್ಯ ಕಾರ್ಯ ನಿರ್ವಾಹಕ

(ನ್ಯೂಸ್ ಕಡಬ)newskadaba.com, ಅ. 09 ಮುಂಬೈ: ಟಾಟಾ ಟ್ರಸ್ಟ್ನ ಮುಖ್ಯ ಕಾರ್ಯ ನಿರ್ವಾಹಕ ಸಿದ್ಧಾರ್ಥ್ ಶರ್ಮಾ ಅವರು “ರತನ್ ಟಾಟಾ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಟಾಟಾ ಟ್ರಸ್ಟ್ ಅವಿರತವಾಗಿ ಶ್ರಮಿಸಲಿದೆ” ಎಂದು ಹೇಳಿದ್ದಾರೆ. ಟಾಟಾ ಸಮೂಹಗಳಲ್ಲಿ ಕಾರ್ಯ ನಿರ್ವ ಹಿಸುವ ಪ್ರತಿಯೊಬ್ಬರು ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕೆಂದು ಶರ್ಮಾ ತಿಳಿಸಿದ್ದಾರೆ. ಟಾಟಾ ಟ್ರಸ್ಟ್ ಲಾಭೋದ್ದೇಶವಿಲ್ಲದ ಸಮೂಹವಾಗಿದ್ದು, ಉಪ್ಪಿನಿಂದ ಸಾಫ್ಟವೇರ್‌ ಉದ್ಯಮದವರೆಗೂ ಮುಂ‍ಚುಣಿಯಲ್ಲಿದೆ. ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿದ್ದ ರತನ್ ಟಾಟಾ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣಕ್ಕೆ ಭಾಜನರಾಗಿದ್ದರು ಎಂದು ಶರ್ಮಾ ಹೇಳಿದ್ದಾರೆ.

Also Read  ರಕ್ತವರ್ಣ ಚಂದ್ರ ಗ್ರಹಣ ಎಲ್ಲೆಲ್ಲಿ ಸಂಭವಿಸುತ್ತೆ?

error: Content is protected !!