ಕುಂತೂರು: ಬೈಕ್ ಸ್ಕಿಡ್ ಆಗಿ ಪಲ್ಟಿ ► ಬಾಲಕ ಗಂಭೀರ, ಸವಾರ ಪಾರು

(ನ್ಯೂಸ್ ಕಡಬ) newskadaba.com ಕಡಬ, ಮಾ.14. ಬೈಕೊಂದು ಸ್ಕಿಡ್ ಆಗಿ ಉರುಳಿ ಬಿದ್ದ ಪರಿಣಾಮ ಬಾಲಕನೋರ್ವ ಗಂಭೀರ ಗಾಯಗೊಂಡ ಘಟನೆ ಕುಂತೂರಿನ ಪೆರಾಬೆ ಎಂಬಲ್ಲಿ ಬುಧವಾರದಂದು ನಡೆದಿದೆ.

ಗಾಯಾಳು ಬಾಲಕನನ್ನು ಪೆರಾಬೆ ಗ್ರಾಮದ ಪಾಲೆಚಾರು ನಿವಾಸಿ ವಿಶ್ವನಾಥ ಗೌಡ ಎಂಬವರ ಪುತ್ರ ಪೆರಾಬೆ ಶಾಲೆಯ ಒಂದನೇ ತರಗತಿಯ ಬಾಲಕ ಜಯಕುಮಾರ್ ಎಂದು ಗುರುತಿಸಲಾಗಿದೆ. ಈತ ತನ್ನ ತಂದೆಯೊಂದಿಗೆ ಬುಧವಾರದಂದು ಶಾಲೆಗೆ ಆಗಮಿಸುತ್ತಿದ್ದಾಗ ಪೆರಾಬೆ ಬಳಿ ಬೈಕ್ ಸ್ಕಿಡ್ ಆಗಿ ದಿರ್ಘಟನೆ ಸಂಭವಿಸಿದೆ. ಗಾಯಾಳುಗಳಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಅಜಿಲಮೊಗರು ಹೋಗುವ ರಸ್ತೆಯಲ್ಲಿ ರಾತ್ರಿ ಕಂಡುಬಂದ ಯಮರಕ್ಕಸ- ಭಯಭೀತರಾದ ಪ್ರಯಾಣಿಕರು - ವೈರಲ್ ಫೇಕ್ ಹರಡಿದ ವಿಘ್ನ ಸಂತೋಷಿಗಳು

error: Content is protected !!
Scroll to Top