(ನ್ಯೂಸ್ ಕಡಬ)newskadaba.com, ಅ. 09 ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ನಾಳೆ ಪ್ರಪಂಚದಾದ್ಯಂತ ಪ್ರೇಕ್ಷಕರ ಮುಂದೆ ಬರುತ್ತಿದೆ. ಎ.ಪಿ ಅರ್ಜುನ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಉದಯ್ ಕೆ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡವು ಪತ್ರಿಕಾಗೋಷ್ಢಿಯಲ್ಲಿ ಮಾರ್ಟಿನ್, ನನ್ನ ಸಿನಿ ಜರ್ನಿಯ ಬಿಗ್ ಬಜೆಟ್ ಚಿತ್ರ. ನಿರ್ಮಾಪಕರು ನನ್ನ ಮೇಲೆ ಭರವಸೆಯಿಟ್ಟು ಇಷ್ಟು ದುಡ್ಡನ್ನು ಹಾಕಿದ್ದಾರೆ. ನಮ್ಮ ಮಾವ ಅರ್ಜುನ್ ಸರ್ಜಾ ಅವರು ಉತ್ತಮ ಕಥೆ ಮಾಡಿ ಕೊಟ್ಟಿದಾರೆ, ಪ್ರತಿಯೊಬ್ಬ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಮಾರ್ಟಿನ್‌ಉತ್ತಮವಾಗಿ ಮೂಡಿಬಂದಿದೆ ಎಂದು ಹೇಳಿದ್ದಾರೆ.
Also Read ಮನೆಯಲ್ಲಿ ಸಣ್ಣ ಸಣ್ಣ ಕಿರಿಕಿರಿ ಗಂಡ ಹೆಂಡತಿ ಜಗಳ ಮನಸ್ತಾಪ ಉಂಟಾಗಲು ಕಾರಣಗಳು | ಸೂಕ್ತ ನಿವಾರಣೆ ಇಲ್ಲಿದೆ